ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಾಗಲಕೋಟೆ | ಸದ್ಯಕ್ಕಿಲ್ಲ ಪ್ರವಾಹ ಭೀತಿ: ಇರಲಿ ಎಚ್ಚರ

ಮಹಾರಾಷ್ಟ್ರದಲ್ಲಿ ಸುರಿಯುತ್ತಿದೆ ಉತ್ತಮ ಮಳೆ * ತುಂಬಿ ತುಳುಕುತ್ತಿದೆ ಕೃಷ್ಣಾ ನದಿ
Published : 22 ಜುಲೈ 2024, 6:37 IST
Last Updated : 22 ಜುಲೈ 2024, 6:37 IST
ಫಾಲೋ ಮಾಡಿ
Comments
ಆಲಮಟ್ಟಿ ಹಿನ್ನೀರಿನಲ್ಲಿ ಘಟಪ್ರಭಾ ನದಿ ಒಡಲು ಭರ್ತಿಯಾಗಿದೆ
ಆಲಮಟ್ಟಿ ಹಿನ್ನೀರಿನಲ್ಲಿ ಘಟಪ್ರಭಾ ನದಿ ಒಡಲು ಭರ್ತಿಯಾಗಿದೆ
ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು ಪ್ರವಾಹ ಎದುರಾಗಬಹುದಾದ ನದಿ ತೀರದ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದರು
ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು ಪ್ರವಾಹ ಎದುರಾಗಬಹುದಾದ ನದಿ ತೀರದ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದರು
ಸದ್ಯಕ್ಕೆ ಪ್ರವಾಹ ಸಮಸ್ಯೆ ಎದುರಾಗಿಲ್ಲ. ಜಿಲ್ಲಾಡಳಿತ ಪ್ರವಾಹ ಎದುರಿಸಲು ಅವಶ್ಯಕ ಸಿದ್ಧತೆ ಮಾಡಿಕೊಂಡಿದೆ. ಅಧಿಕಾರಿಗಳಿಗೆ ಕೇಂದ್ರ ಸ್ಥಾನ ಬಿಡದಂತೆ ಸೂಚಿಸಲಾಗಿದೆ
ಜಾನಕಿ ಕೆ.ಎಂ. ಜಿಲ್ಲಾಧಿಕಾರಿ
ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಜ್ಜು
ಬಾಗಲಕೋಟೆ: ಹಿಂದಿನ ವರ್ಷಗಳಲ್ಲಿ ಉಂಟಾದ ಪ್ರವಾಹ ಆಧಾರದ ಮೇಲೆ ಈಗಾಗಲೇ ಪ್ರವಾಹ ಎದುರಾಗಬಹುದಾದ ಗ್ರಾಮಗಳನ್ನು ಗುರುತಿಸಿದೆ. ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಹೊಂದಿದ್ದು ನದಿಗಳ ನೀರಿನ ಹರಿವು ಮಳೆ ಪ್ರಮಾಣದ ಮಾಹಿತಿ ಪಡೆದುಕೊಳ್ಳುತ್ತಿದೆ. ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು ಈಗಾಗಲೇ ಅಧಿಕಾರಿಗಳೊಂದಿಗೆ ಹಲವಾರು ಸುತ್ತಿನ ಸಭೆ ನಡೆಸಿದ್ದಾರೆ. ಬೋಟು ಲೈಫ್‌ ಜಾಕೆಟ್ ಸೇರಿದಂತೆ ಅವಶ್ಯವಿರುವ ಸಾಮಗ್ರಿಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ. ಮುಳುಗು ಈಜು ತಜ್ಞರ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ. ನೋಡಲ್‌ ಅಧಿಕಾರಿಗಳನ್ನೂ ನೇಮಿಸಿ ನದಿಗಳ ನೀರಿನ ಹರಿವಿನ ಮೇಲೆ ನಿಗಾ ಇಡಲಾಗಿದೆ.
ನೀರಿಗೆ ಇಳಿಯಬೇಡಿ
ಬಾಗಲಕೋಟೆ: ನದಿ ತೀರದಲ್ಲಿ ಅಳವಡಿಸಲಾದ ಪಂಪ್‌ಸೆಟ್‌ಗಳನ್ನು ತೆರೆವು ಮಾಡಲು ವಾಹನಗಳನ್ನು ತೊಳೆಯಲು ಮುಳುಗಿದ ಸೇತುವೆಗಳ ಮೇಲೆ ವಾಹನ ಸಂಚಾರದಂತಹ ಸಾಹಸಕ್ಕೆ ಮುಂದಾಗಬೇಡಿ. ಇಂತಹ ದುಸ್ಸಾಹಸಕ್ಕೆ ಇಳಿದ ಹಲವಾರು ಜನರು ಜಿಲ್ಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ನದಿಗಳಲ್ಲಿ ನೀರಿನ ಹರಿವು ಜೋರಾಗಿರುವುದರಿಂದ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುವ ಸಾಧ್ಯತೆಗಳಿವೆ. ಕೃಷ್ಣಾ ನದಿ ಈಗಾಗಲೇ ಜೋರಾಗಿ ಹರಿಯಲಾರಂಭಿಸಿದೆ. ನೀರಿನ ಸೆಳೆತ ಜೋರಾಗಿದೆ. ಅನಿವಾರ್ಯ ಇದ್ದರೆ ಜಿಲ್ಲಾಡಳಿತದ ನೆರವು ಪಡೆಯಿರಿ. ನೀರಿಗೆ ಇಳಿದು ಅಪಾಯ ತಂದುಕೊಳ್ಳಬೇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT