ಮುಧೋಳ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ ಕಳ್ಳತನದ ಆರೋಪ ಮಾಡುತ್ತ ದೇಶದ ತುಂಬ ಅಡ್ಡಾಡುತ್ತಿದ್ದಾರೆ. ಯಾವುದೇ ಖಚಿತ ಸಾಕ್ಷಿ, ದಾಖಲೆ ಇಲ್ಲದೇ ಸುಖಾಸುಮ್ಮನೆ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ದೂರಿದರು.

ಅವರು ಶುಕ್ರವಾರ ನಗರದ ದತ್ತ ಸಂಸ್ಕೃತಿಕ ಭವನದಲ್ಲಿ ನಡೆದ ಬಿಜೆಪಿ ಬಿಎಲ್ಎ 2ಗಳ ಸಮಾವೇಶದಲ್ಲಿ ಮಾತನಾಡಿ, ‘ನವೆಂಬರ್ ತಿಂಗಳಿಂದ ರಾಜ್ಯದಲ್ಲಿ ನಡೆಯುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಕಾರ್ಯಕರ್ತರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ದೇಶದ ನಾಗರಿಕತೆ ರುಜುವಾತು ಮಾಡುವ ಈ ಪರಿಷ್ಕರಣೆಯ ಮಹತ್ವವನ್ನು ಪ್ರತಿ ಮತದಾರರಿಗೆ ತಿಳಿ ಹೇಳಿ ಯಾರೊಬ್ಬರೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಆಯಾ ಬಿಎಲ್ಎ–2 ಗಳ ಜವಾಬ್ದಾರಿ’ ಎಂದು ಹೇಳಿದರು.

ಬಿಎಲ್ಎ– 1 ಬಸವರಾಜ ಮಳಲಿ ಮಾತನಾಡಿ, ‘ಮುಧೋಳ ಕ್ಷೇತ್ರದಲ್ಲಿ 212 ಮತಗಟ್ಟೆಗಳು ಇವೆ. ಪ್ರತಿ ಮತಗಟ್ಟೆಯಲ್ಲಿ 250ರಿಂದ 300 ಮತದಾರರು ಇದ್ದಾರೆ. ಮೂರು ತಿಂಗಳ ಕಾಲ ನಡೆಯುವ ಪರಿಷ್ಕರಣೆಯಲ್ಲಿ ಪ್ರತಿ ಬಿಎಲ್ಎ–2ಗಳು ಪ್ರತಿ ದಿನ 10 ಮತದಾರರನ್ನು ಸಂಪರ್ಕಿಸಿದರೆ ಒಂದು ತಿಂಗಳಲ್ಲಿ ಕಾರ್ಯ ಮುಗಿಯುತ್ತದೆ. ಪ್ರತಿಯೊಬ್ಬರೂ ನಿಷ್ಠೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಹಕಾರ ನೀಡಬೇಕು. ನುಸಳುಕೋರರು ಸೇರದಂತೆ. ಗ್ರಾಮೀಣ ಹಾಗೂ ನಗರ ಎರಡೂ ಕಡೆಗಳಲ್ಲಿ ಹೆಸರು ಸೇರಿಸದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷರಾದ ಸಂಗಣ್ಣಗೌಡ ಕಾತರಕಿ, ಕರಬಸಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಚಿನ್ನನ್ನವರ, ಜಿಲ್ಲಾ ಕಾರ್ಯದರ್ಶಿ ಡಾ.ರವಿ ನಂದಗಾಂವಿ, ಕೆ.ಆರ್. ಮಾಚಪ್ಪನವರ, ಬಂಡು ಘಾಟಗೆ, ನಗರಸಭೆ ಸದಸ್ಯ ಗುರುಪಾದ ಕುಳಲಿ, ನಾಗಪ್ಪ ಅಂಬಿ, ಸಾದಾಶಿವ ಇಟಕನ್ನವರ, ಅನಂತರಾವ ಘೋರ್ಪಡೆ, ಅನೂಪ ಚವಾಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.