ಗುಳೇದಗುಡ್ಡ: ಪಟ್ಟಣದ ಷಡಕ್ಷರಯ್ಯ ಸ್ವಾಮಿಗಳ ಬೃಹನ್ಮಠದಲ್ಲಿ ಜಾತ್ರಾ ಮಹೋತ್ಸವ, ಬಸಯ್ಯ ಅಜ್ಜನವರ ಜಾತ್ರೆ ಹಾಗೂ ಷಡಕ್ಷರಯ್ಯ ಸ್ವಾಮೀಜಿ 27ನೇ ಪುಣ್ಯಾರಾಧನೆಯ ಅಂಗವಾಗಿ ಕುಂಭ ಮೆರವಣಿಗೆ, ಅಗ್ಗಿ ಉತ್ಸವ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ಸೋಮವಾರ ಜರುಗಿತು.

ಬೃಹನ್ಮಠದಲ್ಲಿ ದೇವಿ ಪಾರಾಯಣ ಬಸಯ್ಯ ಅಜ್ಜನವರ ತಪೋ ಗದ್ದುಗೆಗೆ ಮಹಾರುದ್ರಾಭಿಷೇಕ ನಡೆಯಿತು. ಅಗ್ಗಿ ಉತ್ಸವ ಮಠದಿಂದ ಆರಂಭಗೊಂಡು ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಗಂಗಾಪೂಜೆ ನಡೆಯಿತು. ಜಾತ್ರೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ನಡೆದ ಮಹಿಳೆಯರ ಕುಂಭಮೇಳ, ನಂದಿಕೋಲು, ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆದು ಶ್ರೀಮಠಕ್ಕೆ ಬಂದು ತಲುಪಿತು.

ನಂತರ ಪುರವಂತರಿಂದ ಅಗ್ಗಿ ಪ್ರವೇಶ ನಂತರ ದೇವಿಗೆ ಉಡಿ ತುಂಬಿ ಮಹಾಪೂಜೆ ನೆರವೇರಿಸಲಾಯಿತು. ಷಡಕ್ಷಯ್ಯ ಮಠದ ಅಯ್ಯಪ್ಪಯ್ಯ ಹಿರೇಮಠ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ರೋಣದ ವಿಶ್ವನಾಥ ದೇವರು, ಕಂದಕೂರು ಕಲ್ಮಠದ ಸಿದ್ದಲಿಂಗಯ್ಯ ಸ್ವಾಮೀಜಿ, ಮೈಲಾರಲಿಂಗೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಕಮತಗಿ, ಗುಳೇದಗುಡ್ಡ, ಹುನಗುಂದ, ಹರದೊಳ್ಳಿ ವಿವಿಧ ಕಡೆಗಳಿಂದ ಅನೇಕ ಜನಪದ ವಾದ್ಯ ಮೇಳ, ಕುಂಭಮೇಳ ಮೆರವಣಿಗೆಗೆ ವಿಶೇಷ ಕಳೆ ತಂದವು.

ಕಾರ್ಯಕ್ರಮದಲ್ಲಿ ಶರಣಬಸಪ್ಪ ತಾಂಡೂರ, ಹನಮಂತ ಪಲಮಾರಿ, ಶಂಕರ ಲಕ್ಕುಂಡಿ, ಬಸವರಾಜ ತಾಂಡೂರ, ಶಿವಪ್ಪ ಕೊಕತಿ, ಸಂಗನಬಸಪ್ಪ ಮಾಮನಿ, ಈಶ್ವರ ಎಣ್ಣಿ, ಯಮನಪ್ಪ ವಾಲೀಕಾರ, ಯಲಗುರದಪ್ಪ ತೊಗಲಂಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.