ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಮನಸೆಳೆದ ಜೋಡೆತ್ತಿನ ಗಾಡಿ ಸ್ಪರ್ಧೆ

Published 25 ಮೇ 2024, 14:15 IST
Last Updated 25 ಮೇ 2024, 14:15 IST
ಅಕ್ಷರ ಗಾತ್ರ

ಮಹಾಲಿಂಗಪುರ: ಸಮೀಪದ ಬಿಸನಾಳ ಗ್ರಾಮದಲ್ಲಿ ಬನ್ನೆಮ್ಮದೇವಿ ರಥೋತ್ಸವ ಮತ್ತು ಮಾರುತೇಶ್ವರ ಓಕುಳಿ ಅಂಗವಾಗಿ ಮಾರುತೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ಶನಿವಾರ ಹಮ್ಮಿಕೊಂಡ ಜೋಡೆತ್ತಿನ ಗಾಡಿ ಸ್ಪರ್ಧೆ ಗಮನಸೆಳೆಯಿತು.

ಫ್ಯಾಕ್ಟರಿ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ 20 ಜೋಡೆತ್ತುಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ರೈತರು ಹವ್ಯಾಸಿ ಸ್ಪರ್ಧಾಳುಗಳಂತೆ ಅವರ ಜೋಡೆತ್ತಿನ ಗಾಡಿಯನ್ನು ವೇಗವಾಗಿ ಓಡಿಸಿದರು.  ಸ್ಪರ್ಧೆಗೆ ನಿಗದಿಪಡಿಸಿದ ಒಂದು ನಿಮಿಷದ ಅವಧಿಯಲ್ಲಿ ಗರಿಷ್ಠ ದೂರ ಕ್ರಮಿಸಲು ಪರಸ್ಪರ ಪೈಪೋಟಿ ನಡೆಸಿದವು. ಅಕ್ಕಪಕ್ಕ ನೆರೆದಿದ್ದ ಜನಸ್ತೋಮ ಶಿಳ್ಳೆ, ಕೇಕೆ ಹಾಕಿ ರೈತರಿಗೆ ಹುಮ್ಮಸ್ಸು ನೀಡಿದರು.

ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಜೋಡೆತ್ತು ಸ್ಪರ್ಧೆಗೆ ಚಾಲನೆ ನೀಡಲಾಯಿತು. ಮಹಾಂತೇಶ ಹಿಟ್ಟಿನಮಠ, ಮಹಾಲಿಂಗಪ್ಪ ಸನದಿ, ಪ್ರಕಾಶ ಚನ್ನಾಳ, ಅಶೋಕ ತಳವಾರ, ಹಣಮಂತ ಮೋಪಗಾರ, ಮಾರುತಿ ಕರೋಶಿ, ಮಹಾಲಿಂಗ ಶಿರೋಳ, ಬಸವರಾಜ ಮರನೂರ, ವಿಜಯ ಭಸ್ಮೆ, ಮಹಾಲಿಂಗ ನಾಯಕ, ಮಲ್ಲಪ್ಪ ಭದ್ರಶೆಟ್ಟಿ, ಬಸವರಾಜ ತೇಲಿ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT