ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಟಿಲ ಸಮಸ್ಯೆಗೂ ಇಲ್ಲಿದೆ ಸರಳ ಚಿಕಿತ್ಸೆ

Last Updated 2 ಆಗಸ್ಟ್ 2020, 8:11 IST
ಅಕ್ಷರ ಗಾತ್ರ

ಕಳಕಳಿಯೊಂದಿಗೆ ನಿಮ್ಮ ಆರೋಗ್ಯದ ಕಾಳಜಿ....
ಇಂಥದೊಂದು ಧ್ಯೇಯದೊಂದಿಗೆ ಬಾಗಲಕೋಟೆ ನಗರದಲ್ಲಿ 24X7 ಜನತೆಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಆಶೀರ್ವಾದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಎಲುಬು ಕೀಲು ಹಾಗೂ ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವ ತಾಣವಾಗಿದೆ.
ಚಿಕ್ಕಮಕ್ಕಳ ಅಂಗ ನ್ಯೂನತೆ, ಪೋಲಿಯೊದಿಂದ ಉಂಟಾದ ದೀರ್ಘಕಾಲಿಕ ಸಮಸ್ಯೆಗಳು, ಅಪಘಾತದಲ್ಲಿ ಸಂಭವಿಸಿದ ಬಹುಅಂಗಗಳ ಮೂಳೆ ಮುರಿತ (ಪಾಲಿಟ್ರಾಮಾ), ನವಜಾತ ಶಿಶುಗಳ ಬೆನ್ನುಹುರಿ ತೊಂದರೆಯಂಥ ಸಾವಿರಾರು ಸಮಸ್ಯೆಗಳನ್ನು ನಾಲ್ಕು ವರ್ಷಗಳಲ್ಲಿ ಶೇ 95ಕ್ಕೂ ಹೆಚ್ಚು ಯಶಸ್ಸಿನೊಂದಿಗೆ ಪರಿಹರಿಸಿ ರೋಗಿಗಳ ಮನ ಗೆದ್ದಿರುವುದು ಈ ಆಸ್ಪತ್ರೆ ಹೆಗ್ಗಳಿಕೆ.

ಎಲುಬು ಕೀಲುಗಳ ತೊಂದರೆಗಳಿಗೆ ಯೋಗ್ಯ ದರದಲ್ಲಿ ಅಗತ್ಯ ಚಿಕಿತ್ಸೆ ಒದಗಿಸಬೇಕು ಎಂಬ ಧ್ಯೇಯದೊಂದಿಗೆ ಎಲುಬು ಕೀಲುಗಳ ಶಸ್ತ್ರಚಿಕಿತ್ಸಕ ಡಾ.ಸಂತೋಷ ಚಿಮ್ಮನಕಟ್ಟಿ 2016 ಏಪ್ರಿಲ್ 3ರಂದು ಈ ಆಸ್ಪತ್ರೆ ಆರಂಭಿಸಿದರು. ಇದಕ್ಕೂ ಮುನ್ನ ತಮಿಳುನಾಡಿನ ಕೊಯಮತ್ತೂರು ಗಂಗಾ ವೈದ್ಯಕೀಯ ಕೇಂದ್ರ ಮತ್ತು ಆಸ್ಪತ್ರೆಯ ಎಲುಬು ಕೀಲುಗಳ ವಿಭಾಗದಲ್ಲಿ ಡಿ ಆರ್ಥೋ, ಡಿಎನ್ಬಿ ಅಧ್ಯಯನ ಪೂರೈಸಿರುವ ಡಾ.ಚಿಮ್ಮನಕಟ್ಟಿ ಬಾದಾಮಿ ಹಾಗೂ ಬಾಗಲಕೋಟೆ ನಗರದ ಬೇರೆ ಬೇರೆ ಆಸ್ಪತ್ರೆಗಳಲ್ಲಿ 10 ವರ್ಷಗಳ ಸೇವೆ ಸಲ್ಲಿಸಿ ವಿಶೇಷವಾಗಿ ಗ್ರಾಮೀಣ ಭಾಗದ ರೋಗಿಗಳಿಗೆ ಚಿಕಿತ್ಸೆ ನೀಡಿದವರು.

ಈ ಆಸ್ಪತ್ರೆಯಲ್ಲಿ ಡಾ.ಚಿಮ್ಮನಕಟ್ಟಿ ಅವರೊಂದಿಗೆ ಇನ್ನೊಬ್ಬ ತಜ್ಞವೈದ್ಯ ಡಾ.ರಾಜು ಅಕ್ಕಿಮರಡಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕೂಡ ಗಂಗಾ ಆಸ್ಪತ್ರೆಯಲ್ಲೇ ಕೀಲುಗಳ ಮರುಜೋಡಣೆ ವಿಭಾಗದಲ್ಲಿ ಫೆಲೋಷಿಪ್ ಪಡೆದಿದ್ದಾರೆ. ಬಾಗಲಕೋಟೆ ನಗರದ ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಹಾಗೂ ನಗರದ ಇತರ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ ವೈದ್ಯರಾಗಿದ್ದಾರೆ.

ಎಲುಬು ಕೀಲುಗಳಿಗೆ ಸಂಬಂಧಿಸಿದಂತೆ 2016ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಿಕಾಟ್ ಕಾನ್ಫರೆನ್ಸ್ ಸೇರಿದಂತೆ ಅನೇಕ ಕಾರ್ಯಾಗಾರಗಳಲ್ಲಿ ಈ ಇಬ್ಬರೂ ವೈದ್ಯರು ಭಾಗವಹಿಸಿದ್ದಾರೆ.

ಇವರೊಂದಿಗೆ ಈ ಆಸ್ಪತ್ರೆಯಲ್ಲಿ ಮೂರು ವರ್ಷಗಳಿಂದ ನರರೋಗ ಶಸ್ತ್ರಚಿಕಿತ್ಸೆ, ಮೆದುಳು ಹಾಗೂ ಬೆನ್ನುಹುರಿಯ ಸೂಕ್ಷ್ಮದರ್ಶಕ ಶಸ್ತ್ರಚಿಕಿತ್ಸೆಗಳ ವಿಭಾಗದಲ್ಲಿ ಖ್ಯಾತ ವೈದ್ಯರಾದ ಡಾ.ಶ್ರೀನಿವಾಸ ಓದುಗೌಡರ, ಡಾ.ಕೃಷ್ಣಮೂರ್ತಿ ಜಾಲಿಹಾಳ ಅವರು ಸೇವೆ ಸಲ್ಲಿಸುತ್ತಿದ್ದು, ಮೆದುಳಿನಲ್ಲಿ ಉಂಟಾಗುವ ಗಡ್ಡೆ (ಬ್ರೇನ್ ಟ್ಯೂಮರ್), ರಕ್ತನಾಳಗಳು ಹಾಗೂ ಬೆನ್ನುಹುರಿಗೆ ಸಂಬಂಧಿಸಿದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ಸಂತೋಷ ಇಜೇರಿ ಕೂಡ ಈ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ವಿವಿಧ ಬಗೆಯ ಕ್ಯಾನ್ಸರ್ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಮೂಲಕ ಪರಿಹಾರ ಸೂಚಿಸಿದ್ದಾರೆ. ಇಲ್ಲಿ ಯಾವುದೇ ಸಂದರ್ಭದಲ್ಲೂ ಚಿಕಿತ್ಸೆ ಲಭಿಸುತ್ತದೆ ಎಂಬ ವಿಶ್ವಾಸದಿಂದ ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲೂಕುಗಳು, ನೆರೆ ಜಿಲ್ಲೆಗಳಾದ ಯಾದಗಿರಿ, ಗದಗ, ವಿಜಯಪುರ, ರಾಯಚೂರು ಹಾಗೂ ಗ್ರಾಮೀಣ ಭಾಗಗಳಿಂದಲೂ ಜನ ಈ ಆಸ್ಪತ್ರೆಗೆ ಬರುತ್ತಾರೆ.

ಆಸ್ಪತ್ರೆಯು ರೈಲ್ವೆ ನಿಲ್ದಾಣಕ್ಕೆ ಹತ್ತಿರ ಇರುವುದರಿಂದ ಹಾಗೂ ಆಸ್ಪತ್ರೆ ಹತ್ತಿರದಲ್ಲೇ ಸಾರಿಗೆ ಬಸ್ ನಿಲ್ದಾಣವೂ ಇರುವುದರಿಂದ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಬರುವ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಿದೆ.
ಸೂಪರ್ಸ್ಪೆಶಾಲಿಟಿ ಪರಿಣತಿ ಹೊಂದಿರುವ ಐವರು ಯುವ ವೈದ್ಯರು ಆಶೀರ್ವಾದ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ ನೀಡಲು ಲಭ್ಯವಿರುವುದು ಈ ಭಾಗದ ಜನತೆಗೆ ವರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT