ಹುನಗುಂದ: ತಾಲ್ಲೂಕಿನಲ್ಲಿ ಕೃಷ್ಣೆ, ಮಲಪ್ರಭಾ ನದಿಗಳು ಹರಿಯುತ್ತಿವೆ. ಜೊತೆಗೆ ನಾರಾಯಣಪುರ ಜಲಾಶಯದ ಹಿನ್ನೀರಿನ ವಿಶಾಲ ಪ್ರದೇಶ ಒಳಗೊಂಡಿದ್ದರೂ, ಬೇಸಿಗೆ ಸಮಯದಲ್ಲಿ ತಾಲ್ಲೂಕಿನ ಜನರ ಕುಡಿಯುವ ನೀರಿನ ಬವಣೆ ತೀರದಾಗಿದೆ.

ತಾಲ್ಲೂಕಿನಲ್ಲಿ ಮುಗನೂರು ಮತ್ತು 8 ಗ್ರಾಮಗಳು, ಕೂಡಲಸಂಗಮ, ಕಟಗೂರು ಮತ್ತು ತುರುಡಗಿ, ಧನ್ನೂರು ಮತ್ತು 8 ಗ್ರಾಮಗಳು, ಇದ್ದಲಗಿ ಮತ್ತು 11 ಗ್ರಾಮಗಳು ಹಾಗೂ ಇಲಾಳ ಮತ್ತು 17 ಗ್ರಾಮಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಟ್ಟಿವೆ. ನೀರು ಸರಬರಾಜು ಮಾಡಲು ಪ್ರಮುಖ ಸ್ಥಳಗಳಲ್ಲಿ ಬೃಹತ್ ನೀರಿನ ಟ್ಯಾಂಕ್ಗಳನ್ನು ನಿರ್ಮಿಸಿ, ಅಲ್ಲಿಂದ ಜನಸಂಖ್ಯೆಗೆ ಅನುಗುಣವಾಗಿ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಇದರೊಂದಿಗೆ ಸ್ಥಳೀಯವಾಗಿ ಲಭ್ಯವಿರುವ ಜಲ ಮೂಲಗಳಿಂದಲೂ ನೀರು ಪೂರೈಸಲಾಗುತ್ತಿದೆ.

ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಜೊತೆಗೆ ನಿರ್ವಹಣೆ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದೆ.

ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದ ಹೊರ ವಲಯದಲ್ಲಿ ನಿರ್ಮಿಸಿರುವ ಇಲಾಳ ಸೇರಿದಂತೆ 17 ಗ್ರಾಮಗಳಿಗೆ ನೀರು ಪೂರೈಸುವ ಘಟಕಕ್ಕೆ ನೀರು ಸರಬರಾಜು ಮಾಡುವ ಜಾಕ್ವೆಲ್ನ ಪಂಪ್ ರಿಪೇರಿ, ಪೈಪ್ಲೈನ್ ದುರಸ್ತಿಗಳಿಂದ ಏಪ್ರಿಲ್ ತಿಂಗಳೊಂದರಲ್ಲಿ ಎರಡು,ಮೂರು ಬಾರಿ ನೀರು ಪೂರೈಕೆ ಸ್ಥಗಿತಗೊಂಡ ಪರಿಣಾಮ ಕೆಲ ಗ್ರಾಮಗಳ ಜನರು ನೀರಿಗಾಗಿ ಪರದಾಡುವಂತಾಯಿತು.

ಗ್ರಾಮೀಣ ಪ್ರದೇಶಗಳ ಮನೆ, ಮನೆಗೆ ಕುಡಿಯುವ ನೀರು ಪೂರೈಸುವ ಜಲಜೀವನ ಮಿಷನ್ ಯೋಜನೆ ಕಾಮಗಾರಿ ಕೆಲವು ಕಡೆ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ತಾಲ್ಲೂಕಿನ ಅಮೀನಗಡ ಪಟ್ಟಣವು ಸಹ ನೀರಿನ ಸಮಸ್ಯೆಯಿಂದ ಹೊರತಾಗಿಲ್ಲ. ಅಮೀನಗಡ ಪಟ್ಟಣದಲ್ಲಿ ಮೂರು, ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ದೊಡ್ಡದಾದ ಪಟ್ಟಣವಾದರೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ.

ಹಗಲು–ರಾತ್ರಿ ನೀರಿಗಾಗಿ ಕಾಯುವ ಜನ

ಹುನಗುಂದದ ವಿದ್ಯಾನಗರ ಓಂ ಶಾಂತಿನಗರ ನಾಗಲಿಂಗ ನಗರ ತೇನಹಳ್ಳಿ ಲೇಔಟ್ ಸೇರಿದಂತೆ ಹಲವು ಕಡೆ ಸ್ವಲ್ಪಮಟ್ಟಿನ ನೀರಿನ ಸಮಸ್ಯೆ ಇದೆ. ಇಲ್ಲಿನ ವಾರ್ಡ್ಗಳಿಗೆ ಒಂದೊಂದು ಸಮಯದಲ್ಲಿ ನೀರು ಪೂರೈಸಲಾಗುತ್ತಿದೆ. ಪಟ್ಟಣದ ಪ್ರಮುಖ ವಾರ್ಡ್ಗಳಿಗೆ ಎರಡು ಮೂರು ದಿನಗಳಿಗೊಮ್ಮೆ ನೀರು ಪೂರೈಸಿದರೆ ಇನ್ನುಳಿದ ಕಡೆ ನಾಲ್ಕೈದು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ನೀರು ಸರಬರಾಜಿನ ಸಮಯದಲ್ಲಿನ ಬದಲಾವಣೆಯಿಂದಾಗಿ ಸ್ಥಳೀಯ ನಿವಾಸಿಗಳು ನೀರಿಗಾಗಿ ಹಗಲು ರಾತ್ರಿ ಎನ್ನದೇ ಕಾಯಬೇಕು. ಪಟ್ಟಣದಲ್ಲಿ ಏಳು ಶುದ್ಧ ಕುಡಿಯುವ ನೀರಿನ ಘಟಗಳಿದ್ದು ಅವುಗಳಲ್ಲಿ ಐದು ಕಾರ್ಯ ನಿರ್ವಹಿಸುತ್ತಿದ್ದು ಎರಡು ಘಟಕಗಳು ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ.

ಕಾರ್ಯನಿರ್ವಹಿಸದ 31 ಶುದ್ಧ ಕುಡಿಯುವ ನೀರಿನ ಘಟಕಗಳು

ತಾಲ್ಲೂಕಿನಲ್ಲಿ ಒಟ್ಟು 74 ಶುದ್ಧ ಕುಡಿಯುವ ನೀರಿನ ಘಟಗಳಿದ್ದು ಅವುಗಳಲ್ಲಿ 43 ಕಾರ್ಯನಿರ್ವಹಿಸುತ್ತಿವೆ. ಉಳಿದ 31 ಶುದ್ಧ ಕುಡಿಯುವ ನೀರಿನ ಘಕಟಗಳು ಕಾರ್ಯನಿರ್ವಹಿಸುತ್ತಿಲ್ಲ. ಅವುಗಳಲ್ಲಿ 13 ಆರ್ ಒ ಘಟಕಗಳು ಗ್ರಾಮ ಪಂಚಾಯ್ತಿ ಅವರು ವಿದ್ಯುತ್ ಬಿಲ್ ಪಾವತಿಸದಿರುವುದು ಘಟಕಗಳಿಗೆ ನೀರು ಪೂರೈಸದಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ನೀರಿನ ಘಟಕಗಳು ಸ್ಥಗಿತ ಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.