ಹುನಗುಂದ: ಪ್ರೌಢಶಾಲಾ ಶಿಕ್ಷಕರಿಗೆ ಡಿ.13 ರವರೆಗೆ (ಗಣಿತ, ಸಮಾಜ ವಿಜ್ಞಾನ ಹಾಗೂ ಕನ್ನಡ ವಿಷಯ ಬೋಧಿಸುವ ಶಿಕ್ಷಕರಿಗೆ) ಇಳಕಲ್ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಆರು ದಿನಗಳ ಕಾಲ ತರಬೇತಿ ಹಮ್ಮಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಅಕ್ಟೋಬರ್ ರಜೆ, ಸಮೀಕ್ಷೆ ಕಾರಣಕ್ಕೆ ಹೆಚ್ಚಿನ ರಜೆ ನೀಡಿದ್ದರಿಂದ ಬೋಧನೆ ಹಿಂದುಳಿದಿದೆ. ಜನವರಿ ಮೊದಲ ವಾರದಿಂದ ಸರಣಿ ಪರೀಕ್ಷೆ ನಡೆಸಬೇಕಿದೆ. ಈ ಹಂತದಲ್ಲಿ ಶಿಕ್ಷಕರಿಗೆ ತರಬೇತಿ ಹಮ್ಮಿಕೊಂಡಿರುವುದು ಪಠ್ಯ ಪೂರ್ಣಗೊಳಿಸುವುದು ಕಷ್ಟವಾಗಿದೆ.

ಸೆ.19 ರಿಂದ ಅ.2ರವರೆಗೆ ದಸರಾ ರಜೆ ನೀಡಲಾಗಿತ್ತು. ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಹಿನ್ನಲೆಯಲ್ಲಿ ರಜೆಯನ್ನು 18ರ ವರೆಗೆ ವಿಸ್ತರಿಸಲಾಗಿತ್ತು. ದೀಪಾವಳಿ ಬಂದಿದ್ದರಿಂದ ಅ.22ವರೆಗೆ ತರಗತಿಗಳು ನಡೆಯಲಿಲ್ಲ.

ಎರಡನೇ ಅವಧಿ ಪಠ್ಯ ಬೋಧನೆವನ್ನು ಡಿಸೆಂಬರ್ ಅಂತ್ಯದೊಳಗೆ ಮುಗಿಸಬೇಕೆಂದು ಇಲಾಖೆ ಆದೇಶಿಸಿದೆ. ಯಾವುದೇ ತರಬೇತಿ ಹಮ್ಮಿಕೊಳ್ಳಬಾರದು ಎಂದು ಸೂಚಿಸಿದೆ. ಪಠ್ಯ ಬೋಧನೆ ಮುಗಿಸಲು ಶಿಕ್ಷಕರು ಹರಸಾಹಸ ಪಡುತ್ತಿರುವಾಗ, ತಾಲ್ಲೂಕಿನ 102 ಶಿಕ್ಷಕರಿಗೆ ಮತ್ತೇ ತರಬೇತಿ ಹಮ್ಮಿಕೊಂಡಿರುವುದು ಶಿಕ್ಷಕರು ಮತ್ತು ಮಕ್ಕಳಿಗೆ ಆತಂಕ ಉಂಟು ಮಾಡಿದೆ.

‘ತರಬೇತಿಗೆ ಹೋದರೆ ಪಠ್ಯವನ್ನು ಅವಸರ, ಅವಸರವಾಗಿ ಪೂರ್ಣಗೊಳಿಸಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಶಿಕ್ಷಕರೊಬ್ಬರು ದೂರಿದರು.

ಜ.5 ರಿಂದ ಸರಣಿ ಪರೀಕ್ಷೆಗಳು ನಡೆಯುವುದರಿಂದ ಡಿ.31ರೊಳಗೆ ಪಠ್ಯ ಬೋಧನೆ ಮುಕ್ತಾಯಗೊಳ್ಳಬೇಕು. ಸರಣಿ ಪರೀಕ್ಷೆ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ತರಬೇತಿಯನ್ನು ಜನೆವರಿ ಅಂತ್ಯದಲ್ಲಿ ಹಮ್ಮಿಕೊಂಡರೆ ಶಿಕ್ಷಕರು ನಿರಾಳವಾಗಿ ತರಬೇತಿಗೆ ಹಾಜರಾಗಬಹುದಾಗಿದೆ.

ಎರಡು ತಿಂಗಳ ಅವಧಿಯಲ್ಲಿ ಸಮಾಜ ವಿಜ್ಞಾನ ವಿಷಯದ 17 ಪಾಠಗಳು, ಗಣಿತ ವಿಷಯದ ಏಳು ಪಾಠಗಳು ಹಾಗೂ ಕನ್ನಡ ವಿಷಯದ 11 ಪಾಠಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ತರಬೇತಿಗೆ ಹೋದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.