ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಕಲ್: ಚಾವಣಿ ಕುಸಿದು ಇಬ್ಬರು ಮಕ್ಕಳು ಸಾವು

Published 31 ಮೇ 2024, 13:19 IST
Last Updated 31 ಮೇ 2024, 13:19 IST
ಅಕ್ಷರ ಗಾತ್ರ

ಇಳಕಲ್: ಸಮೀಪದ ಕಂದಗಲ್ ಗ್ರಾಮದಲ್ಲಿ ಶುಕ್ರವಾರ ಮಣ್ಣಿನ ಮನೆಯ ಚಾವಣಿ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಗೀತಾ ಈಶ್ವರಯ್ಯ ಆದಾಪೂರಮಠ (14) ಹಾಗೂ ರುದ್ರಯ್ಯ ಈಶ್ವರಯ್ಯ ಆದಾಪೂರಮಠ (10) ಮೃತರು. ಮಕ್ಕಳ ತಂದೆ, ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದರು. ಅಜ್ಜ, ಅಜ್ಜಿ ಮನೆಯ ಹೊರಗಿದ್ದಾಗ ಚಾವಣಿ ಕುಸಿದಿದೆ.

ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

‘ಪೋಷಕರು ಮಕ್ಕಳಿಗೆ ಶಾಲೆಗೆ ಹೋಗಲು ತಿಳಿಸಿದ್ದರು. ಮೊದಲ ದಿನ ಬಹಳ ವಿದ್ಯಾರ್ಥಿಗಳು ಬರುವುದಿಲ್ಲ  ಎಂದುಕೊಂಡು ಶಾಲೆಗೆ ಹೋಗದೆ, ಮನೆಯಲ್ಲೇ ಉಳಿದಿದ್ದರು’ ಎಂದು ಪೋಷಕರು ತಿಳಿಸಿದರು. ಶಾಸಕ ವಿಜಯಾನಂದ ಕಾಶಪ್ಪನವರ ಸ್ಥಳಕ್ಕೆ ಭೇಟಿ ಮಾಡಿ, ಪೋಷಕರಿಗೆ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT