ಹುನಗುಂದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ 31 ರಂದು ಬೆಂಗಳೂರಿನಲ್ಲಿ ನಡೆಯುವ ಅನಿರ್ಧಾಷ್ಟಾವಧಿ ಹೋರಾಟದಲ್ಲಿ ಜಿಲ್ಲೆಯ ಅಕ್ಷರ ದಾಸೋಹ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸಿದ್ದಮ್ಮ ಕಲ್ಗುಡಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಹೋರಾಟದಲ್ಲಿ ನೌಕರರು ಪಾಲ್ಗೊಳ್ಳುವುದರಿಂದ ಇದೇ 31 ರಂದು ಜಿಲ್ಲೆಯಲ್ಲಿ ಬಿಸಿಯೂಟ ಬಂದ್ ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಕ್ಷರ ದಾಸೋಹ ನೌಕರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಕನಿಷ್ಠ ಕೂಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಆರ್ಥಿಕ ಭದ್ರೆತೆ ಇಲ್ಲದಂತಾಗಿದೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಘೋಷಿಸಿದಂತೆ ಗೌರವ ಧನ ಹೆಚ್ಚಿಸಬೇಕು. ರಾಜ್ಯದ ಅಕ್ಷರ ದಾಸೋಹದ 8 ಸಾವಿರ ನಿವೃತ್ತ ನೌಕರರಿಗೆ ಒಂದು ಲಕ್ಷ ಇಡಗಂಟು ಕೊಡಬೇಕು. ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ಒಂದು ಸಾವಿರ ವೇತನವನ್ನು ಜನವರಿ 2023 ರಿಂದ ಅನ್ವಯಿಸಿ ಜಾರಿ ಮಾಡವುದು, ಸಧ್ಯ ಎಸ್‌ಡಿಎಂಸಿಗೆ ವಹಿಸಿದ ಸಾದಿಲ್ವಾರ ಖಾತೆಯನ್ನು ಮೊದಲಿನಂತೆ ನಮಗೆ ವಹಿಸಬೇಕು ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ಸಂಘದ ತಾಲ್ಲೂಕು ಅದ್ಯಕ್ಷೆ ಹುಸನವ್ವ ಚಲವಾದಿ, ಸಂಘದ ಕಾರ್ಯದರ್ಶಿ ಶಾರದಾ ಗೋನಾಳ,ಗೀತಾ ತೆಂಗಿನಕಾಯಿ ಸಂಘದ ಖಜಾಂಚಿ ಬೀಬಿಜಾನ್ ನದಾಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.