ನೀರಾವರಿ ಸಂಘ–ಸಂಸ್ಥೆಗಳಿಗೆ ಮಾಹಿತಿಯಿಲ್ಲ
ಬಾಗಲಕೋಟೆ: ನೀರಾವರಿ ಇಲಾಖೆ ಸಂಘ–ಸಂಸ್ಥೆಗಳವರಿಗೆ ಡಿ.ಎಂ. ನಂಜುಂಡಪ್ಪ ವರದಿಯ ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿಯ ಬಾಗಲಕೋಟೆ ಜಿಲ್ಲಾಮಟ್ಟದ ಸಮಾಲೋಚನಾ ಸಭೆಯ ಮಾಹಿತಿ ನೀಡಿರಲಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸಂಘ–ಸಂಸ್ಥೆಗಳವರಿಗೆ ಮಾಹಿತಿ ಹಂಚಿಕೊಳ್ಳುವಂತೆ ಹೇಳಿದಾಗ ಅವುಗಳ ಪ್ರತಿನಿಧಿಗಳ್ಯಾರೂ ಇರಲಿಲ್ಲ. ಬೆಂಗಳೂರಿನಲ್ಲಿಯೇ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸಮಿತಿ ಸದಸ್ಯ ಕಾರ್ಯದರ್ಶಿ ಹೇಳಿದರು. ಮಾಧ್ಯಮದವರಿಗೂ ಸಭೆ ಆರಂಭವಾದ ಮೇಲೆಯೇ ಮಾಹಿತಿ ನೀಡಲಾಗಿತ್ತು.