ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ  ರಾಜ್ಯೋತ್ಸವ ಸಂಭ್ರಮಕ್ಕೆ ಸಚಿವ ಕತ್ತಿ ಚಾಲನೆ

Last Updated 1 ನವೆಂಬರ್ 2021, 4:51 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲಾಡಳಿತದಿಂದ ಇಲ್ಲಿನ ನವನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ನಾಡ ಹಬ್ಬದ ಸಂಭ್ರಮಕ್ಕೆ ಇಂಬು ನೀಡಿದರು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಹಾಗೂ ಕನ್ನಡ ನಾಡು-ನುಡಿ ಕಟ್ಟಿ ಬೆಳೆಸಲು ಶ್ರಮಿಸಿದ ಮಹನೀಯರನ್ನು ಸ್ಮರಿಸಿದರು.

ಕರ್ನಾಟಕದಲ್ಲಿ ಕನ್ನಡದ ಅಸ್ಮಿತೆಯ ಹೊರತಾಗಿ ಬೇರೆ ಯಾವುದೇ ಸಂಗತಿಗಳು ನಮ್ಮ ಸರ್ಕಾರದ ಆದ್ಯತೆಗಳಲ್ಲ ಎಂದು ಸ್ಪಷ್ಟಪಡಿಸಿದ ಅವರು,
ಈ ಬಾರಿ ರಾಜ್ಯೋತ್ಸವದ ಅಂಗವಾಗಿ ಅ.28ರಂದು ರಾಜ್ಯದಾದ್ಯಂತ ಕನ್ನಡ' ಗೀತೆಗಳ ಗಾಯನ ಹಮ್ಮಿಕೊಂಡಿದ್ದನ್ನು ಉಲ್ಲೇಖಿಸಿದರು.

22 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ:

ಶಿಕ್ಷಣ, ಸಾಹಿತ್ಯ, ನೃತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜಸೇವೆ, ಜಾನಪದ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 22 ಮಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ಸನ್ಮಾನಿತರ ವಿವರ ಇಂತಿದೆ: ನಾವಲಗಿಯ ಜೀವಪ್ಪ ಬಡಿಗೇರ, ಅಮೀನಗಡದ ಬಸವರಾಜ ಭಜಂತ್ರಿ, ಮುಗಳೊಳ್ಳಿಯ ಹನಮಂತ ಭಜಂತ್ರಿ, ಹುನಗುಂದದ ಶಿವಪುತ್ರಪ್ಪ ತಾರಿವಾಳ, ಅಂಕಲಗಿಯ ಲಕ್ಷ್ಮಣ ಮಾದರ, ಅಂಬ್ಲಿಕೊಪ್ಪದ ಮುಪ್ಪನಗೌಡ ಗೌಡರ, ಇಳಕಲ್ ನ ಎನ್.ಎಸ್.ಸನ್ನೂರ, ಬನಹಟ್ಟಿಯ ಜಯಶ್ರೀ ಬನಹಟ್ಟಿ, ಲೋಕಾಪುರದ ಹಯಾತ್ ಸಾಬ್ ಮದರಖಾನ, ಗುಳೇದಗುಡ್ಡದ ಮಹಾದೇವ ಜಗತಾಪ, ಕಲಾದಗಿಯ ಹನಮಂತ ತಳವಾರ, ವಜ್ಜಲದ ಸಿದ್ದಪ್ಪ ಮಾದರ, ಬಾದಾಮಿಯ ಡಾ.ಶಿಲಾಕಾಂತ ಪತ್ತಾರ, ಹುನ್ನೂರಿನ ವಿಜಯಕುಮಾರ ಪವಾರ, ಲೋಕಾಪುರದ ಗುಣಾಕರ ಶೇಖರ ಶೆಟ್ಟಿ, ಬಾಗಲಕೋಟೆಯ ಆರ್.ಡಿ.ಬಾಬು, ಇಳಕಲ್ ನ ಅಶೋಕ ಶ್ಯಾವಿ, ನವನಗರದ ಲಕ್ಷ್ಮೀ ಗೌಡರ, ಮುಧೋಳದ ರತ್ನಾಕರ ಶೆಟ್ಟಿ, ಕಲಾದಗಿಯ ರಾಘವೇಂದ್ರ ಕಲಾದಗಿ, ಬೀಳಗಿಯ ತಯಾಮಖಾನ ಇನಾಂದಾರ, ಬಾಗಲಕೋಟೆಯ ನಿಂಗರಾಜ ದೊಡ್ಡಮಬ್ರುಮಕರ.

ಗಮನ ಸೆಳೆದ ಕವಾಯತು: ಸಚಿವ ಕತ್ತಿ ಅವರು ಪರೇಡ್ ವೀಕ್ಷಣೆ ವೇಳೆ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಕನ್ನಡದ ಹಾಡುಗಳ ನುಡಿಸಿದರು‌. ಪಥಸಂಚನ ಅನುಮತಿ, ನಿರ್ಗಮನದ ವೇಳೆ ಸಿಬ್ಬಂದಿಗೆ ಕನ್ನಡದಲ್ಲಿ ಸೂಚನೆ, ನಿರ್ದೇಶನ ನೀಡಲಾಯಿತು.

ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ.ಸಿ.ಗದ್ದಿಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಸಿಇಒ ಟಿ.ಭೂಬಾಲನ್, ಎಸ್ಪಿ ಲೋಕೇಶ ಜಗಲಾಸರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT