ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೂರ: ಸೌಲಭ್ಯ ವಂಚಿತ ಮಾಲಗಿ ಗ್ರಾಮ

ಪಾಳು ಬಿದ್ದ ಶೌಚಾಲಯ; ಅಸಮರ್ಪಕ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ
Published 19 ಜುಲೈ 2023, 5:07 IST
Last Updated 19 ಜುಲೈ 2023, 5:07 IST
ಅಕ್ಷರ ಗಾತ್ರ

ವಿನಾಯಕ ದಾಸಮನಿ

ಕೆರೂರ: ಸಮೀಪದ ಹೂಲಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಮಾಲಗಿ ಗ್ರಾಮವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ.

ಗ್ರಾಮದಲ್ಲಿ ಸುಮಾರ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಗ್ರಾಮಸ್ಥರು ಬೆಳಿಗ್ಗೆ ಹೊಲ, ಗದ್ದೆಗಳಿಗೆ ತೆರಳಬೇಕೆಂದರೆ ಸರಿಯಾಗಿ ರಸ್ತೆಯ ವ್ಯವಸ್ಥೆಯಿಲ್ಲ. ಗ್ರಾಮದಲ್ಲಿ ಎಲ್ಲಂದರಲ್ಲಿ ಚರಂಡಿ ನೀರು ಹರಿದು ರಸ್ತೆ ಮಧ್ಯದಲ್ಲೆ ಸಂಗ್ರಹವಾಗುತ್ತಿವೆ. ಹೀಗಿರುವಾಗ ಜನರು ನಿತ್ಯ ಕೆಲಸಗಳಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

‘ಮಾಲಗಿ ಗ್ರಾಮದಲ್ಲಿ ಪಂಚಾಯ್ತಿ ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಿದರೂ ಗ್ರಾಮದಲ್ಲಿ ಬಯಲು ಶೌಚ ಮಾತ್ರ ತಪ್ಪಿಲ್ಲ. ಗ್ರಾಮಕ್ಕೆ ಹೋಗಬೇಕೆಂದರೆ ಗಲೀಜು ವಾಸನೆ. ಮೂಗಿಗೆ ಬಟ್ಟೆಕಟ್ಟಿಕೊಂಡು ಹೋಗುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ. ಗ್ರಾಮದಲ್ಲಿ ಮಳೆಯಾದರೆ ಗ್ರಾಮಕ್ಕೆ ಪರಸ್ಥಳದಿಂದ ಬರುವ ಸಾರ್ವಜನಿಕರು ಕೆಸರಿನಲ್ಲಿ ನಡೆದು ಬರಬೇಕು. ಗ್ರಾಮಕ್ಕೆ ಸಿಸಿ ರಸ್ತೆ ಸಂಪರ್ಕ ಇಲ್ಲದೆ ಎಷ್ಟೋ ವರ್ಷಗಳು ಗತಿಸಿವೆ. ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಸರಿನಿಂದ ಕೂಡಿಕೊಂಡ ರಸ್ತೆಯಲ್ಲಿ ರೈತರು ನಿತ್ಯ ಕೃಷಿ ಚಟುವಟಿಕೆಗಳಿಗೆ ಎತ್ತಿನ ಬಂಡಿ ಕಟ್ಟಿಕೊಂಡು ರಸ್ತೆ ಮೇಲೆ ಹೋಗಲು ಹರಸಾಹಸ ಪಡಬೇಕಾಗುತ್ತದೆ. ಕೆಸರಿನಲ್ಲಿ ಎತ್ತುಗಳು ಬಂಡಿಯನ್ನು ಎಳೆಯಬೇಕಾದರೆ ಹೈರಾಣಾಗುತ್ತಿವೆ. ವಾಹನ ಸವಾರರಿಗೂ ಕೂಡ ತೊಂದರೆಯಾಗಿದೆ.

ಸ್ವಚ್ಛ ಭಾರತ ಅಭಿಯಾನದಡಿ ನಿರ್ಮಾಣವಾದ ಶೌಚಾಲಯದ ಬಳಕೆ ಇಲ್ಲದೆ ಹಾಗೆ ಪಾಳು ಬಿದ್ದಿವೆ. ಶೌಚಾಲಯದ ಸುತ್ತಮುತ್ತ ಮುಳ್ಳಿನಕಂಟಿಗಳಿಂದ ಆವರಿಸಿಕೊಂಡಿದೆ. ಗ್ರಾಮದಲ್ಲಿನ ಚರಂಡಿಗಳು ಕಟ್ಟಿಕೊಂಡು ಗಬ್ಬು ವಾಸನೆ ಬೀರುತ್ತಿದೆ. ರಾತ್ರಿಯಾದರೆ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಗ್ರಾಮದಲ್ಲಿ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕ ಇದ್ದು, ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಗ್ರಾಮದ ಶಾಲೆಗಳು ಶಿಥಿಲಗೊಂಡಿವೆ. ಮಳೆಯಾದರೆ ಮಕ್ಕಳು ಪಾಠ ಕೇಳುವುದು ಕಷ್ಟವಾಗಿದೆ. ಆದಷ್ಟು ಬೇಗ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.

ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ.

ಮಾಲಗಿ ಗ್ರಾಮದಲ್ಲಿ ರಸ್ತೆಯಲ್ಲಿ ಸಂಗ್ರಹವಾಗಿರುವ ಚರಂಡಿ ನೀರು
ಮಾಲಗಿ ಗ್ರಾಮದಲ್ಲಿ ರಸ್ತೆಯಲ್ಲಿ ಸಂಗ್ರಹವಾಗಿರುವ ಚರಂಡಿ ನೀರು

ಗ್ರಾಮದಲ್ಲಿ ತಪ್ಪದ ಬಯಲು ಶೌಚ ಪದ್ಧತಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಶಿಥಿಲಗೊಂಡ ಶಾಲಾ ಕಟ್ಟಡ

ಗ್ರಾಮದಲ್ಲಿ ಬಹುದಿನಗಳಿಂದ ಕುಡಿಯುವ ನೀರು ಶೌಚಾಲಯ ಸಿಸಿ ರಸ್ತೆ ನಿರ್ಮಾಣ ಚರಂಡಿ ಸಮಸ್ಯೆಗಳು ಅಭಿವೃದ್ಧಿ ಕಾಣದ ಹಾಗೆ ಉಳಿದಿವೆ

-ಸಂಜೀವ ಅಗಸಿಮನಿ ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT