ಸೋಮವಾರ, ಜೂನ್ 14, 2021
25 °C

ಕಿರುತೆರೆ ನಟಿ ಸೋನು ಪಾಟೀಲ ತಾಯಿ ಆಸ್ಪತ್ರೆ ಬಿಲ್ ₹ 5 ಲಕ್ಷ ಪಾವತಿಸಿದ ಸುದೀಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ತಾಯಿಯ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿದ್ದ ಬಿಗ್ ಬಾಸ್ ಸೀಸನ್ 2ರ ಸ್ಪಧಿ೯,  ಕಿರುತೆರೆ ನಟಿ ಸೋನು ಪಾಟೀಲ ಅವರ ನೆರವಿಗೆ ನಟ ಕಿಚ್ಚ ಸುದೀಪ್ ಧಾವಿಸಿದ್ದಾರೆ. ಸೋನು ಅವರ ತಾಯಿ ಮಹಾದೇವಿ ಪಾಟೀಲ ಅವರ ಆಸ್ಪತ್ರೆ ಬಿಲ್ ಹಾಗೂ ಔಷಧದ ವೆಚ್ಚವಾಗಿ ₹ 5 ಲಕ್ಷದವರೆಗೆ ಸುದೀಪ್ ಪಾವತಿಸಿದ್ದಾರೆ.

ಸುದೀಪ್ ನೀಡಿರುವ ನೆರವಿನ ಬಗ್ಗೆ ಸ್ವತಃ ಸೋನು ಪಾಟೀಲ ವಿಡಿಯೊ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ.

‘ತಾಯಿ ಮಹಾದೇವಿ ತೀವ್ರವಾಗಿ ನ್ಯುಮೋನಿಯಾ ಬಾಧಿತರಾಗಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡದಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಅವರನ್ನು ಬಾಗಲಕೋಟೆಯ ಶಕುಂತಲಾ ಆಸ್ಪತ್ರೆಗೆ ದಾಖಲಿಸಿದ್ದೆನು. ಈ ವೇಳೆ ಅಮ್ಮನ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಯಿತು. ಕೋವಿಡ್ ಕರ್ಪ್ಯೂ ಕಾರಣ ಈಗ ಶೂಟಿಂಗ್ ನಿಂತಿದೆ. ಹೀಗಾಗಿ ಎಲ್ಲಿಯೂ ಕೆಲಸವಿಲ್ಲದಂತಾಗಿದೆ. ಹಣ ಸಾವಿರ ಲೆಕ್ಕದಲ್ಲಿ ಆಗಿದ್ದರೆ ಹೇಗಾದರೂ ಹೊಂದಿಸುತ್ತಿದ್ದೆ. ಆದರೆ ಲಕ್ಷಗಟ್ಟಲೆ ಬೇಕಾಯಿತು. ಕೆಲವು ಸ್ನೇಹಿತರ ಬಳಿ ಆರ್ಥಿಕ ನೆರವು ಕೇಳಿದರೂ ಸಿಗಲಿಲ್ಲ. ಸಹಾಯ ಮಾಡುವುದಾಗಿ ಹೇಳಿದವರೂ ಸ್ಪಂದಿಸಲಿಲ್ಲ. ಕೊನೆಗೆ ಸುದೀಪ್ ಅಣ್ಣ ಅವರನ್ನು ಸಂಪರ್ಕಿಸಿದೆನು. ಅವರು ನನ್ನ ಕಷ್ಟಕ್ಕೆ ಸ್ಪಂದಿಸಿದರು’ ಎಂದು ಸೋನು ಪಾಟೀಲ ಹೇಳಿದ್ದಾರೆ.

‘ಸುದೀಪ್ ತಮ್ಮ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಮೂಲಕ ದವಾಖಾನೆಯ ಸಂಪೂರ್ಣ ಬಿಲ್ ಪಾವತಿಸಿದ್ದಾರೆ. ಆ ಮೊತ್ತ ₹ 5 ಲಕ್ಷದಷ್ಟು ಆಗಿದೆ. ಸಂಕಷ್ಟದ ಸಂದರ್ಭದಲ್ಲಿ ಬೆನ್ನಿಗೆ ನಿಂತ ಸುದೀಪ್ ಅಣ್ಣ ಅವರಿಗೆ ಧನ್ಯವಾದ ಅರ್ಪಿಸುವೆ. ಯಾವತ್ತಿಗೂ ಅವರಿಗೆ ಋಣಿ ಆಗಿರುವೆ’ ಎಂದು ಸೋನು ಪಾಟೀಲ ವಿಡಿಯೊದಲ್ಲಿ ಕಣ್ಣೀರು ಹಾಕಿದ್ದಾರೆ.

ಇದನ್ನೂ  ಓದಿ.. ಕೋವಿಡ್‌ ತೀವ್ರತೆಗೆ ಬಿಗ್‌ಬಾಸ್‌ ಅರ್ಧಕ್ಕೇ ರದ್ದು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು