ಬುಧವಾರ, ಅಕ್ಟೋಬರ್ 21, 2020
26 °C

16 ತಿಂಗಳ ನಂತರ ಐಕ್ಯಮಂಟಪ ವೀಕ್ಷಣೆಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ದುರಸ್ತಿ ಕಾರ್ಯದ ಕಾರಣ ಮುಚ್ಚಲಾಗಿದ್ದ ಇಲ್ಲಿನ ಬಸವಣ್ಣನ ಐಕ್ಯ ಮಂಟಪವು ಶನಿವಾರ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ಬರೋಬ್ಬರಿ 16 ತಿಂಗಳ ನಂತರ ಇದು ವೀಕ್ಷಣೆಗೆ ಮುಕ್ತಗೊಂಡಿದೆ.

'₹87 ಲಕ್ಷ ವೆಚ್ಚದಲ್ಲಿ ಐಕ್ಯಮಂಟಪದ ದುರಸ್ತಿ ಕಾರ್ಯ ನಡೆದಿದೆ. ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿದೆ' ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಎಂ.ಗಂಗಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.

ಐಕ್ಯಮಂಟಪದಲ್ಲಿ ಬಿರುಕುಗಳು ಕಂಡು ಬಂದಿದ್ದ ಕಾರಣ ಅದರ ದುರಸ್ತಿಗಾಗಿ 2019 ಮೇ 22 ರಿಂದ ಬಸವಣ್ಣನ ಐಕ್ಯಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು  ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಿಷೇಧಿಸಿತ್ತು. ಆರು ತಿಂಗಳಲ್ಲಿ ಮುಗಿಯಬೇಕಿದ್ದ ದುರಸ್ತಿ ಕಾರ್ಯ ಪ್ರವಾಹ, ಕೊರೊನಾ ಸಂಕಷ್ಟದ ಕಾರಣ ವಿಳಂಬವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು