ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ | ಲೋಕಾಯುಕ್ತ ದಾಳಿ; ಪುರಸಭೆ ಸಿಬ್ಬಂದಿ ಬಂಧನ

Published 1 ಜೂನ್ 2024, 15:24 IST
Last Updated 1 ಜೂನ್ 2024, 15:24 IST
ಅಕ್ಷರ ಗಾತ್ರ

ಬಾದಾಮಿ: ಲಂಚ ಪಡೆಯುತ್ತಿದ್ದ ಇಲ್ಲಿನ ಪುರಸಭೆ ಬಿಲ್‌ ಕಲೆಕ್ಟರ್‌ ಲಕ್ಷ್ಮಣ ಶಿಕ್ಕಲಗಾರ ಎಂಬಾತನನ್ನು ಬಾಗಲಕೋಟೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಪ್ರಸನ್ನ ಹಕ್ಕಾಪಕ್ಕಿ ಎಂಬುವರಿಗೆ ಪ್ಲಾಟ್‌ ಉತಾರ ಕೊಡಲು ಲಕ್ಷ್ಮಣ ₹3,000 ಲಂಚ ಕೇಳಿದ್ದರು. ಈ ಕುರಿತು ಪ್ರಸನ್ನ ಅವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.

ಶನಿವಾರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಬಾಗಲಕೋಟೆ ಲೋಕಾಯುಕ್ತ ಅಧೀಕ್ಷಕ ಸತೀಶ ಚಿಟಗುಬ್ಬಿ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ಸಿದ್ದೇಶ್ವರ ಮತ್ತು ಇನ್‌ಸ್ಪೆಕ್ಟರ್‌ ಎಂ.ಎಚ್. ಬಿದರಿ ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT