ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ರುಚಿ, ಹೊಳಪು ಕಳೆದುಕೊಳ್ಳುತ್ತಿದೆಯಾ ಮಹಾಲಿಂಗಪುರ ಬೆಲ್ಲ?

ಸಕ್ಕರೆ ಕಾರ್ಖಾನೆಗಳಿಂದ ನೇರ ಪರಿಣಾಮ * ಆಲೆಮನೆಗಳಲ್ಲಿ ಕೃತಕ ಬೆಲ್ಲ ತಯಾರಿಕೆ
ಮಹೇಶ ಮನ್ನಯ್ಯನವರಮಠ
Published : 15 ಜುಲೈ 2024, 6:35 IST
Last Updated : 15 ಜುಲೈ 2024, 6:35 IST
ಫಾಲೋ ಮಾಡಿ
Comments
ಬಿಳಿ ಬೆಲ್ಲ
ಬಿಳಿ ಬೆಲ್ಲ
ಮಹಾಲಿಂಗಪುರದ ಆಲೆಮನೆಯಲ್ಲಿ ಬೆಲ್ಲ ತಯಾರಿಸುತ್ತಿರುವುದು.
ಮಹಾಲಿಂಗಪುರದ ಆಲೆಮನೆಯಲ್ಲಿ ಬೆಲ್ಲ ತಯಾರಿಸುತ್ತಿರುವುದು.
ಸಕ್ಕರೆ ಕಾರ್ಖಾನೆಗಳ ಸ್ಥಾಪನೆ ಹಾಗೂ ಅಧಿಕ ಸಕ್ಕರೆ ಉತ್ಪಾದನೆಯಿಂದ ಬೆಲ್ಲದ ಉತ್ಪಾದನೆ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಬೆಲ್ಲದ ಧಾರಣೆಯೂ ಸಮಸ್ಥಿತಿಯಲ್ಲಿದೆ.
- ಬಿ.ಎಸ್.ಬಾವಿಹಾಳ ಕಾರ್ಯದರ್ಶಿ ಎಪಿಎಂಸಿ ಮಹಾಲಿಂಗಪುರ
ಕೃತಕ ಬೆಲ್ಲ ತಯಾರಿಕೆ ಆರೋಪ
ಬೆಲ್ಲ ತಯಾರಿಸುವ ಆಲೆಮನೆಗಳಲ್ಲಿ ಕೃತಕ ಬೆಲ್ಲ ತಯಾರಿಸಲಾಗುತ್ತಿದೆ ಎನ್ನುವ ಆರೋಪ ಜೋರಾಗಿದೆ. ಬೆಲ್ಲ ತಯಾರಿಕೆಗೆ ಪ್ರಮುಖ ಅಂಶವಾದ ಕಬ್ಬನ್ನು ಬಳಸದೇ ಕೇವಲ ರಾಸಾಯನಿಕಗಳನ್ನು ಉಪಯೋಗಿಸಿ ಬೆಲ್ಲ ತಯಾರಿಸುತ್ತಿರುವುದು ಆತಂಕ ಮೂಡಿಸಿದೆ. ದಶಕಗಳ ಹಿಂದೆ 50ಕ್ಕೂ ಹೆಚ್ಚು ಇದ್ದ ಸಾಂಪ್ರದಾಯಿಕ ಆಲೆಮನೆಗಳ ಸಂಖ್ಯೆ ಈಗ ಕನಿಷ್ಠ ಮಟ್ಟದಲ್ಲಿವೆ. ಮಹಾಲಿಂಗಪುರ ಸುತ್ತ–ಮುತ್ತ ಕೇವಲ ಮೂರು ಆಲೆಮನೆಗಳಿವೆ. ಬೇಡಿಕೆಯನ್ನು ಲಾಭವಾಗಿ ಮಾಡಿಕೊಳ್ಳಲು ಅಡ್ಡದಾರಿ ಹಿಡಿದ ಕೆಲವರು ನಕಲಿ ಬೆಲ್ಲ ತಯಾರಿಕೆಗೆ ಕೈ ಹಾಕಿದ್ದಾರೆ. ಬೆಲ್ಲ ತಯಾರಿಕೆಯ ಕೊನೆಯಲ್ಲಿ ಬಿಸಾಡುವಂತಹ ಅಂಟು ಬೆಲ್ಲ ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿನ ಕಳಪೆ ದರ್ಜೆ ಸಕ್ಕರೆ ತಂದು ಅದಕ್ಕೆ ನೀರು ಇತರೆ ರಾಸಾಯನಿಕ ಬೆರೆಸಿ ಬೆಲ್ಲ ಮಾಡಲಾಗುತ್ತದೆ. ಅಸಲಿ ಬೆಲ್ಲದಂತೆಯೇ ಕಾಣುತ್ತದೆ. ಕಡಿಮೆ ದರಕ್ಕೆ ಉತ್ಪಾದಿಸಿದರೂ ಸಾಮಾನ್ಯ ಬೆಲ್ಲದಷ್ಟೇ ದರಕ್ಕೆ ಮಾರಾಟ ಮಾಡಲಾಗುತ್ತದೆ.
ಬೆಲ್ಲದ ಉತ್ಪಾದನೆ ಕುಂಠಿತ
ಹತ್ತರಿಂದ ಹದಿನೈದು ಜನ ರೈತರು ಸೇರಿ ಗಾಣ ಹಾಕುತ್ತಿದ್ದರು. ಅಲ್ಲಿಗೆ ಕಬ್ಬನ್ನು ತಂದು ಬೆಲ್ಲ ತಯಾರಿಸಿ ಮಾರಾಟ ಮಾಡಿ ಆದಾಯ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ಸ್ಥಿತಿ ಇಲ್ಲ. ಆಗ ₹80-100 ಕೂಲಿಕಾರರು ಸಿಗುತ್ತಿದ್ದರು. ಈಗ ₹400-450 ಒಬ್ಬ ಕೂಲಿಕಾರನಿಗೆ ನೀಡಬೇಕು. ಅಲ್ಲದೆ ಅಗತ್ಯವಾದ ವೇಳೆಯಲ್ಲಿ ರೈತರಿಗೆ ಕೂಲಿಕಾರರು ಸಿಗುವುದಿಲ್ಲ. ಗಾಣದಿಂದ ಬೆಲ್ಲ ತಯಾರಿಸಿ ಹೆಚ್ಚಿನ ಹಣ ವೆಚ್ಚ ಮಾಡಿ ಕೈಸುಟ್ಟುಕೊಳ್ಳದೆ ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬನ್ನು ಕಳಿಸುತ್ತಿದ್ದಾರೆ. ಇದರಿಂದ ಬೆಲ್ಲದ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT