ಬಾಗಲಕೋಟೆ: ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲ್‍ಗೆ ₹7,280 ಹಾಗೂ ಹೆಸರುಕಾಳನ್ನು ಪ್ರತಿ ಕ್ವಿಂಟಲ್‍ಗೆ ₹8,682 ರಂತೆ ಖರೀದಿ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸೂರ್ಯಕಾಂತಿಯನ್ನು ಪ್ರತಿ ಎಕರೆಗೆ 3 ಕ್ವಿಂಟಲ್ನಂತೆ ಪ್ರತಿ ರೈತರಿಂದ ಗರಿಷ್ಠಟ 15 ಕ್ವಿಂಟಲ್ ಖರೀದಿಸಲಾಗುತ್ತದೆ. ಹಾಗೆಯೇ ಹೆಸರುಕಾಳನ್ನು ಪ್ರತಿ ಎಕರೆಗೆ 2 ಕ್ವಿಂಟಲ್ನಂತೆ ಪ್ರತಿ ರೈತರಿಂದ 10 ಕ್ವಿಂಟಲ್ ಖರೀದಿ ಮಾಡಲಾಗುತ್ತದೆ.
45 ದಿನಗಳವರೆಗೆ ರೈತರು ನೋಂದಣಿ ಮಾಡಿಕೊಳ್ಳಬಹುದು. ಖರೀದಿ ಅವಧಿ 90 ದಿನಗಳವರೆಗೆ ಇದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನೂ ಆರಂಭಿಸಲಾಗುತ್ತದೆ.
ತೇವಾಂಶ ಶೇ12 ರಷ್ಟಿರಬೇಕು. ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯಿಂದ ನೀಡಿರುವ ಎಫ್.ಐ.ಡಿ ನಂಬರ್ ಮತ್ತು ಆಧಾರ್ ಕಾರ್ಡ್ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ ಬೆಳೆ ದರ್ಶಕ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ಬೆಳೆ ಬೆಳೆಯುವುದು ಕಂಡು ಬರದಿದ್ದಲ್ಲಿ ಹತ್ತಿರದ ಕೃಷಿ ಇಲಾಖೆಗೆ ಹೋಗಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ನೋಂದಣಿ ಸಮಯದಲ್ಲಿ ಪಹಣಿ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕ್ ಪಾಸ್‌ಬುಕ್ ಪ್ರತಿ ಸಲ್ಲಿಸಬೇಕು.
ಸೂರ್ಯಕಾಂತಿ ಖರೀದಿ ಕೇಂದ್ರಗಳ ವಿವರ: ಬಾಗಲಕೋಟೆ ತಾಲ್ಲೂಕು ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಖಜ್ಜಿಡೋಣಿ, ಬಾದಾಮಿ ತಾಲ್ಲೂಕು ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಕಗಲಗೊಂಬ, ಕೆಂದೂರ, ನಂದಿಕೇಶ್ವರ, ಹೆಬ್ಬಳ್ಳಿ, ಮುಧೋಳ ತಾಲ್ಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಜುನ್ನೂರ, ಬೀಳಗಿ ತಾಲ್ಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಸೊನ್ನ ಹಾಗೂ ಹುನಗುಂದ ತಾಲ್ಲೂಕಿನ ಟಿ.ಎ.ಪಿ.ಸಿ.ಎಂ.ಎಸ್.
ಆ.14ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ‘ಹೆಸರುಕಾಳು ದರ ಕುಸಿತ’ ಕುರಿತು ವಿಶೇಷ ವರದಿ ಪ್ರಕಟವಾಗಿತ್ತು.
ಹೆಸರುಕಾಳು ಖರೀದಿ ಕೇಂದ್ರ
ಟಿಎಪಿಸಿಎಂಎಸ್ ಬಾಗಲಕೋಟೆ (73538 61868)
ಪಿ.ಕೆ.ಪಿ.ಎಸ್ ಹಳ್ಳೂರು (99013 25201)
ಬೆನಕಟ್ಟಿ (97404 06918)
ಎಫ್.ಪಿ.ಒ ರೇಣುಕಾ ಬಾದಾಮಿ ಟಿ.ಎ.ಪಿ.ಸಿ. ಬಾದಾಮಿ (90081 16746)
ಪಿ.ಕೆ.ಪಿ.ಎಸ್ ಬಾದಾಮಿ (96113 58837)
ಕೆರೂರ (99723 01729)
ಎಫ್‍ಪಿಒ ಆಶಾಕಿರಣ (80739 83080)
ಟಿ.ಎ.ಪಿ.ಎಂ.ಎಸ್ ಮುಧೋಳ (92427 83318)
ಎಫ್‍ಪಿಒ ಲೋಕಾಪುರ (98809 27310)
ಎಫ್‍ಪಿಒ ಸರ್ವಬಂಧು (9844474344)
ಇಳಕಲ್ ಜಿ.ಎಫ್ಪಿ.ಸಿ.ಎಲ್ (86602 03311)
ಟಿ.ಎ.ಪಿ.ಸಿ.ಎಂ.ಎಸ್ ಹುನಗುಂದ (94802 62655)
ಎಫ್‍ಪಿಒ ಸುಳೇಭಾವಿ (94497 62433)
ಪಿ.ಕೆ.ಪಿ.ಎಸ್ ಮುಗನೂರ (83103 24070)
ನಂದವಾಡಗಿ (99023 77067)
ಟಿ.ಎ.ಪಿ.ಸಿ.ಎಂ.ಎಸ್ ಜಮಖಂಡಿ (70194 45935)
ಎಫ್‍ಪಿಒ ತೊದಲಬಾಗಿ (97419 98771)
ಬೀಳಗಿ ಟಿ.ಎ.ಪಿ.ಸಿ.ಎಂ.ಎಸ್ (70196 82890)
ಪಿ.ಕೆ.ಪಿ.ಎಸ್ ಬೀಳಗಿ ಕ್ರಾಸ್ (98803 76768).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.