ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪುರ: ಗುಂಪಾಗಿ ಬಂದು ಮತ ಚಲಾಯಿಸಿದ 300ಕ್ಕೂ ಹೆಚ್ಚು ಮತದಾರರು

Published 7 ಮೇ 2024, 15:42 IST
Last Updated 7 ಮೇ 2024, 15:42 IST
ಅಕ್ಷರ ಗಾತ್ರ

ರಾಂಪುರ: ಬಾಗಲಕೋಟೆ ತಾಲ್ಲೂಕಿನ ಬೇವೂರ ಗ್ರಾಮದಲ್ಲಿ ಪ್ರತಿ ಚುನಾವಣೆಯಂತೆಯೇ ಈ ಬಾರಿಯೂ ಗ್ರಾಮದ 6 ನೇ ವಾರ್ಡಿನ ಪರಿಶಿಷ್ಟ ಜಾತಿಯ 300ಕ್ಕೂ ಹೆಚ್ಚು ಮತದಾರರು ಒಂದೇ ಗುಂಪಾಗಿ ಮತಕೇಂದ್ರಕ್ಕೆ ಬಂದು ಮತದಾನ ಮಾಡಿದರು.

ಕಳೆದ 30 ವರ್ಷಗಳಿಂದ ನಡೆದುಕೊಂಡು ಬಂದಿರುವ ಇದಾಗಿದ್ದು, ಎಲ್ಲರೂ ಒಟ್ಟಾಗಿ ತಮ್ಮ ಓಣಿಯಿಂದ ಮತಕೇಂದ್ರಕ್ಕೆ ಬಂದು ಮತ ಚಲಾಯಿಸುತ್ತಾರೆ. ಮಂಗಳವಾರ ಮತದಾನದ ಸಂದರ್ಭದಲ್ಲಿ ಮಧ್ಯಾಹ್ನ 12.30ರ ಹೊತ್ತಿಗೆ ತಮ್ಮ ವಾರ್ಡ್‌ನಿಂದ ಮಹಿಳೆಯರು, ಪುರುಷರು, ಯುವಕ ಮತದಾರರು ಸೇರಿ ಸ್ಥಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಕೇಂದ್ರಕ್ಕೆ ಬರುತ್ತಿದ್ದಂತೆಯೇ ಎಲ್ಲರ ಗಮನ ಅವರತ್ತ ಹರಿಯಿತು.

ಈ ಬಗ್ಗೆ ಸಮಾಜದ ಹಿರಿಯರಾದ ನಿಂಗಪ್ಪ ಕಡೇಮನಿ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ‘ಯಾವುದೇ ಚುನಾವಣೆ ನಡೆದರೂ ನಮ್ಮ ಸಮಾಜದ ಮತದಾರರು ಒಟ್ಟಾಗಿ ಬಂದು ಮತ ಹಾಕುತ್ತೇವೆ. ನಮ್ಮ ಹಿರಿಯರಾದ ಈರಪ್ಪ ಕಡೇಮನಿ, ಚಿದಾನಂದ ಹೊಸಮನಿ, ಯಲ್ಲಪ್ಪ ಕಡೇಮನಿ, ಭೀಮಪ್ಪ ಕಡೇಮನಿ ಅವರ ನೇತೃತ್ವದಲ್ಲಿ ಎಲ್ಲರೂ ಒಟ್ಟುಗೂಡಿ ಬಂದು ಮತ ಹಾಕುವುದು ನಮ್ಮ ಪರಂಪರೆ’ ಎಂದು ಹೇಳಿದರು.

ಬಾಗಲಕೋಟೆ ತಾಲ್ಲೂಕಿನ ಬೇವೂರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ 300 ಕ್ಕೂ ಹೆಚ್ಚು ಮತದಾರರು ಒಟ್ಟಾಗಿ ಮತ ಕೇಂದ್ರಕ್ಕೆ ಆಗಮಿಸಿದರು.
ಬಾಗಲಕೋಟೆ ತಾಲ್ಲೂಕಿನ ಬೇವೂರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ 300 ಕ್ಕೂ ಹೆಚ್ಚು ಮತದಾರರು ಒಟ್ಟಾಗಿ ಮತ ಕೇಂದ್ರಕ್ಕೆ ಆಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT