ಲೋಕಾಪುರ: ಆಸ್ತಿ ವಿಚಾರವಾಗಿ ವೈಷಮ್ಯ ಸಾಧಿಸಿ ಮೈದುನ ತನ್ನ ಅತ್ತಿಗೆಯನ್ನು ಕತ್ತು ಕೊಲೆ ಮಾಡಿರುವ ಘಟನೆ ಮುಧೋಳ ತಾಲ್ಲೂಕಿನ ಮಲ್ಲಾಪುರ ಪಿ.ಎಲ್.ಗ್ರಾಮದ ಸಮೀಪ ಗುರುವಾರ ನಡೆದಿದೆ.

ಸವಿತಾ ಮಂಜುನಾಥ ಕುರಿ (30) ಕೊಲೆಗೀಡಾದ ಮಹಿಳೆ. ಆರೋಪಿ ಸಿದ್ದಪ್ಪ ವಿರುದ್ಧ ಮೃತಳ ತಂದೆ ಬಸಪ್ಪ ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ಯಾಂಕ್ ಸಾಲ ಪಡೆಯಲು ಪ್ರಮಾಣಪತ್ರ ಸಿದ್ಧಪಡಿಸುವುದಕ್ಕೆ ಮುಧೋಳಕ್ಕೆ ಹೋಗುವುದಿದೆ ಎಂದು ಪುತ್ರಿಯನ್ನು ಮನೆಯಿಂದ ಬೈಕ್ನಲ್ಲಿ ಕರೆದುಕೊಂಡು ಹೋಗಿ, ಮಾರ್ಗಮಧ್ಯೆ ಸಿದ್ದಪ್ಪ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹದ ಪಕ್ಕದಲ್ಲಿ ಸುತುಳಿ ಕಂಡುಬಂದಿದ್ದು, ಮಹಿಳೆಯ ಕತ್ತಿನ ಸುತ್ತಲೂ ಕಪ್ಪಾದ ಗುರುತು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.