ಇಳಕಲ್ : ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ, ರಂಗಕರ್ಮಿ ಮಹಾದೇವ ಕಂಬಾಗಿ ಹಾಗೂ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ ಗಂಗಮ್ಮ ಆರೇರ ಅವರು ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಂಬಾಗಿ ಅವರು 4 ದಶಕಗಳಿಂದ ಸ್ನೇಹರಂಗದ ಅಧ್ಯಕ್ಷ, ಸದಸ್ಯರಾಗಿ ಹವ್ಯಾಸಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗಂಗಮ್ಮ ಆರೇರ ಅವರು 5 ದಶಕಗಳಿಂದ ವೃತ್ತಿ ರಂಗಭೂಮಿಯಲ್ಲಿ ಕಲಾವಿದೆಯಾಗಿ ಹೆಸರು ಮಾಡಿದ್ದಾರೆ.