ಗುಳೇದಗುಡ್ಡ: ಭಾರತೀಯ ನೌಕಾಪಡೆಯ ಪ್ರಮುಖ ಸಂಸ್ಥೆ ಐಎನ್ಎಸ್. ಚಿಲ್ಕಾದಲ್ಲಿ ತರಬೇತಿ ಪಡೆದು ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಶಂಕರಲಿಂಗ ಹಾವರಗಿ ಅವರಿಗೆ ಪಟ್ಟಣದಲ್ಲಿ ಭಾನುವಾರ ಅದ್ದೂರಿ ಸ್ವಾಗತ ಕೋರಲಾಯಿತು.

ಭಾರತೀಯ ನೌಕಾಪಡೆಯಲ್ಲಿ 15 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಊರಿಗೆ ಆಗಮಿಸಿದ ಶಂಕರಲಿಂಗ ಹಾವರಗಿ ಅವರನ್ನು ಕುದುರೆ ಮೇಲೆ ಕೂಡಿಸಿ ಪಟ್ಟಣದಲ್ಲಿ ಸಂಭ್ರಮದ ಮೆರವಣಿಗೆ ಮೂಲಕ ನಿವೃತ್ತ ಸೇನಾ ನೌಕರರು ಹಾಗೂ ಗುಳೇದಗುಡ್ಡ ಪಟ್ಟಣದ ನಾಗರಿಕರು ನೌಕಾಪಡೆಯ ಯೋಧರನ್ನು ಬಹಳಷ್ಟು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿದರು.

ಪಟ್ಟಣದ ಮರಡಿಮಠದಿಂದ ಮೆರವಣಿಗೆ ನಡೆದು ಅರಳಿಕಟ್ಟಿ, ಚೌಬಜಾರ್, ಗಚ್ಚಿನಕಟ್ಟಿ ಮೂಲಕ ಹಾಯ್ದು ಶೆಟ್ಟರ ಕಲ್ಯಾಣ ಮಂಟಪಕ್ಕೆ ಬಂದು ತಲುಪಿತು.

ಮೆರವಣಿಗೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗುಳೇದಗುಡ್ಡ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ ಕೋಟಿ, ಉಪಾಧ್ಯಕ್ಷ ಜಮೀರ್ ಮೌಲವಿ, ಕಾರ್ಯಾಧ್ಯಕ್ಷ ಸಿದ್ದರಾಮಯ್ಯ ಪುರಾಣಿಕಮಠ, ಖಜಾಂಚಿ ಈಶ್ವರಪ್ಪ ದಾಸರ, ಪ್ರಧಾನ ಕಾರ್ಯದರ್ಶಿ ಶಿವನಗೌಡ ಪರ್ವತಗೌಡ, ಕಾರ್ಯದರ್ಶಿ ಹರೀಶ ಅಳ್ಳಗಿ, ಸುಭಾಸ ಬಡಿಗೇರ, ಪ್ರಕಾಶ ಗೌಡರ, ಶರೀಫ್ ನದಾಫ್, ಅಶೋಕ ತಮ್ಮಣ್ಣವರ, ಅಶೋಕ ಕಡಪಟ್ಟಿ, ಮಾಗುಂಡಪ್ಪ ಸಂಗಳದ, ರಾಘವೇಂದ್ರ ನಾಗರಶೆಟ್ಟಿ, ಕರವೇ ಅಧ್ಯಕ್ಷ ರವಿ ಅಂಗಡಿ, ಈರಣ್ಣ ಪಟ್ಟಣಶೆಟ್ಟಿ, ಶಶಿಕಾಂತ್ ಕಲ್ಯಾಣಿ, ಮುರುಗೇಶ್ ರಾಜನಾಳ, ಚಂದ್ರು ಪಟ್ಟಣಶೆಟ್ಟಿ ಇನ್ನೂ ಅನೇಕರು ಈ ಸಂಭ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.