ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಭಾರತ ನಿರ್ಮಾಣ ಮೋದಿಯಿಂದ ಸಾಧ್ಯ: ಹನಮಂತ ನಿರಾಣಿ

ರಾಷ್ಟ್ರಕ್ಕೆ ₹41 ಸಾವಿರ ಕೋಟಿ ವೆಚ್ಚದ ರೈಲ್ವೆ ಯೋಜನೆಗಳ ಸಮರ್ಪಣೆ ಸಮಾರಂಭ
Published 26 ಫೆಬ್ರುವರಿ 2024, 14:38 IST
Last Updated 26 ಫೆಬ್ರುವರಿ 2024, 14:38 IST
ಅಕ್ಷರ ಗಾತ್ರ

ಗುಳೇದಗುಡ್ಡ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಗ್ಯಾರಂಟಿಯಿಂದಾಗಿ ನವ ಭಾರತ ಸಂಕಲ್ಪದ ಗುರಿ ಸಾಧನೆ ತಲುಪಿದ್ದೇವೆ. ಇಂದು ₹41 ಸಾವಿರ ಕೋಟಿ ವೆಚ್ಚದ ರೈಲ್ವೆ ಯೋಜನೆಗಳ ಉಡುಗೊರೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ. ಪ್ರಧಾನಮಂತ್ರಿಗಳ ದೂರದೃಷ್ಟಿಯಿಂದ ದೇಶದ ಪ್ರಗತಿ ಸಾಗುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.

ತಾಲ್ಲೂಕಿನ ಗುಳೇದಗುಡ್ಡ ರೈಲ್ವೆ ಸ್ಟೇಷನ್‌ನಲ್ಲಿ ಅಮೃತ ಭಾರತ ಸ್ಟೇಷನ್ ಯೋಜನೆಯಡಿ  ದೇಶದಾದ್ಯಂತ ಸೋಮವಾರ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು 1500 ರಸ್ತೆ ಮೇಲ್ಸೇತುವೆ ಮತ್ತುಅಂಡರಪಾಸ್ ಶಂಕುಸ್ಥಾಪನೆ ಅಂಗವಾಗಿ ಗುಳೇದಗುಡ್ಡ ರೈಲ್ವೆ ಸ್ಟೇಷನ್ ಗುಳೇದಗುಡ್ಡ ಗೇಟ್ ಬದಲಿಗೆ ಮೇಲ್ಸೇತುವೆ ಶಂಕುಸ್ಥಾಪನೆ ಕಾಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಚ್ಛಭಾರತ ಪರಿಕಲ್ಪನೆ ಹೊಂದಿರುವ ರೈಲ್ವೆಗಳ ಸ್ವಚ್ಛತೆ, ರೈಲ್ವೆ ನಿಲ್ದಾಣಗಳು ಮೂಲ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿ ಹೊಂದಿವೆ. ಪ್ರಧಾನ ಮಂತ್ರಿ ಮಾರ್ಗದರ್ಶನದಲ್ಲಿ ಭಾರತೀಯ ರೈಲ್ವೆ ತನ್ನ ಪುನರುಜ್ಜೀವನದ ಸುವರ್ಣ ಹಂತದಲ್ಲಿ ಸಾಗುತ್ತಿದೆ.  ಹತ್ತು ವರ್ಷಗಳಲ್ಲಿ ಪ್ರಧಾನಿಯವರ ಅವಿರತ ಪರಿಶ್ರಮದ ಪ್ರಯತ್ನಗಳು ಮತ್ತು ಮೂಲ ಸೌಕರ್ಯಗಳು ಸೃಷ್ಟಿಗೆ ವಿಶೇಷ ಒತ್ತು ನೀಡಿದ್ದರಿಂದ ಇಂದು ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರೈಲು ವ್ಯವಸ್ಥೆಯನ್ನು ಹೊಂದಿದೆ’ ಎಂದರು.

ಮಾಜಿ ಶಾಸಕರಾದ ರಾಜಶೇಖರ ಶೀಲವಂತ ಮತ್ತು ಉಪನ್ಯಾಸಕ ಚಂದ್ರಶೇಖರ ಕಾಳನ್ನವರ ಮಾತನಾಡಿದರು. ಕೆಲವಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಲ್ಲವ್ವ ಸ ಗೊಂದಿ  ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ಅಂಗವಾಗಿ ಶಾಲಾ ಮಕ್ಕಳಿಗೆ ನಡೆಸಿದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದಮಕ್ಕಳಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು.

ಉಪಾಧ್ಯಕ್ಷೆ ಸುಮಂಗಲಾ ಹನಮಂತ ಮಾದರ, ಮನ್ನಿಸ್ ಅಗರವಾಲ್, ಉಮಾಶಂಕರ, ಕೃಷ್ಣಾಓಗೆನ್ನವರ, ಆಸಂಗೆಪ್ಪನಕ್ಕರಗುಂದಿ, ಪ್ರಮೋದಕವಡಿಮಟ್ಟಿ, ಕಮಲಕಿಶೋರಮಾಲಪಾಣಿ, ಲೋಕಶಉಂಡಗೇರ, ರಾಂದಡಾ, ಭುವನೇಶ ಪೂಜಾರ, ಕನಕಪ್ಪ ಬಂದಕೇರಿ, ಕೆಲವಡಿ ಗ್ರಾಮ ಪಂಚಾಯ್ತಿ ಸದಸ್ಯರು, ರೈಲ್ವೆಇಲಾಖೆ ಅಧಿಕಾರಿಗಳು, ಕೆಲವಡಿ, ಸ್ಟೇಷನ್, ತಿಮ್ಮಸಾಗರ, ಲಿಂಗಾಪೂರ, ಹಿರೇಬೂದಿಹಾಳ, ಹಂಗರಗಿಕಟಗೇರಿ ಕೊಂಕಣ ಕೊಪ್ಪ ತೊಗಣಿಸಿ, ಹಂಸನೂರ ಸುತ್ತ–ಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT