ಮಹಾಲಿಂಗಪುರದಲ್ಲಿ ಕಳೆದ ಮೇ 27 ರಂದು ಕೊಲ್ಲಾಪುರ ಜಿಲ್ಲೆಯ ಸೋನಾಲಿ ಕದಂ ಎಂಬ ಮಹಿಳೆಯ ಭ್ರೂಣ ಗರ್ಭಪಾತ ಮಾಡಿದ್ದು, ಆ ದಿನದಂದೇ ಅವರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಡಾ.ಯರಗಲ್ ಹಾಗೂ ಡಾ.ಪಟ್ಟಣಶೆಟ್ಟಿ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಇಲಾಖಾ ವಿಚಾರಣೆ ಬಾಕಿಯಿಟ್ಟು ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯು ಇಬ್ಬರನ್ನೂ ಅಮಾನತುಗೊಳಿಸಿ ಅದೇಶ ಹೊರಡಿಸಿದೆ.