ಕಲಾದಗಿ: ಮೊಬೈಲ್ ಫೋನ್ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪಾಕಿಸ್ತಾನ ಧ್ವಜದ ಚಿತ್ರ ಹಾಕಿಕೊಂಡ ಆರೋಪದ ಮೇಲೆ ಗ್ರಾಮದ ತೌಸೀಫ್ ಮೆಹತರ್ ಎಂಬುವನನ್ನು ಮಂಗಳವಾರ ಕಲಾದಗಿ ಪೊಲೀಸರು ಬಂಧಿಸಿದ್ದಾರೆ.
‘ಮೊಬೈಲ್ ವಾಟ್ಸ್‌ಆ್ಯಪ್‌ನಲ್ಲಿ ಪಾಕಿಸ್ತಾನದ ಧ್ವಜದ ಚಿತ್ರ ಹಾಕಿಕೊಂಡ ಬಗ್ಗೆ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯ ಮೇರೆಗೆ ತೌಸೀಫ್‌ಗೆ ಠಾಣೆಗೆ ಕರೆತಂದು ಮೊಬೈಲ್ ಪರಿಶೀಲಿಸಿದಾಗ, ಧ್ವಜದ ಚಿತ್ರ ಇರುವುದು ದೃಢಪಟ್ಟಿತು’ ಎಂದು ಕಲಾದಗಿ ಠಾಣೆಯ ಪಿಎಸ್‌ಐ ಚಂದ್ರಶೇಖರ್ ಹೆರಕಲ್ ತಿಳಿಸಿದರು.