ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PU Result: ಬಾಗಲಕೋಟೆ ಜಿಲ್ಲೆಗೆ 11ನೇ ಸ್ಥಾನ

Published 10 ಏಪ್ರಿಲ್ 2024, 14:26 IST
Last Updated 10 ಏಪ್ರಿಲ್ 2024, 14:26 IST
ಅಕ್ಷರ ಗಾತ್ರ

ಬಾಗಲಕೋಟೆ: ಪಿಯು ಫಲಿತಾಂಶದಲ್ಲಿ ಜಿಲ್ಲೆಯು 15ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿಯೂ ಸುಧಾರಣೆ ಕಂಡಿದ್ದು, ಕಳೆದ ವರ್ಷ ಶೇ78.79ರಷ್ಟಿದ್ದ ಫಲಿತಾಂಶ ಈ ಬಾರಿ ಶೇ 87.54ಕ್ಕೆ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಹೊಸದಾಗಿ ಪರೀಕ್ಷೆಗೆ ಹಾಜರಾಗಿದ್ದ 22,848 ವಿದ್ಯಾರ್ಥಿಗಳ ಪೈಕಿ 20,001 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪುನರಾವರ್ತಿತ 1,903 ವಿದ್ಯಾರ್ಥಿಗಳ ಪೈಕಿ, 992, ಖಾಸಗಿ 1,083 ವಿದ್ಯಾರ್ಥಿಗಳ ಪೈಕಿ 438 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಗ್ರಾಮೀಣ ವಿಭಾಗ ಹಾಗೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದ ಶೇ 87.81ರಷ್ಟು ವಿದ್ಯಾರ್ಥಿಗಳು ಪಾಸಗಿದ್ದರೆ, ನಗರ ಪ್ರದೇಶದ ಶೇ 87.43ರಷ್ಟು ಪಾಸಾಗಿದ್ದಾರೆ.

ಶೇ 87.79 ವಿದ್ಯಾರ್ಥಿನಿಯರು ಪಾಸಾಗಿದ್ದರೆ, ಶೇ 77.6ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇಂಗ್ಲಿಷ್‌ ವಿಭಾಗದಲ್ಲಿ ಶೇ 92.29ರಷ್ಟು, ಕನ್ನಡ ವಿಭಾಗದಲ್ಲಿ ಶೇ 76.72ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಕಲಾ ವಿಭಾಗದಲ್ಲಿ 9,056 ವಿದ್ಯಾರ್ಥಿಗಳ ಪೈಕಿ 7,357 ತೇರ್ಗಡೆ ಹೊಂದಿದ್ದು, ಶೇ 81.24 ರಷ್ಟು ಫಲಿತಾಂಶವಾದರೆ, ವಾಣಿಜ್ಯ ವಿಭಾಗದಲ್ಲಿ 4,611 ವಿದ್ಯಾರ್ಥಿಗಳ ಪೈಕಿ 4,038 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ 87.57ರಷ್ಟು ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 9,181 ವಿದ್ಯಾರ್ಥಿಗಳ ಪೈಕಿ 8,6060 ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ 93.74ರಷ್ಟು ತೇರ್ಗಡೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT