ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಶರಣರ ಜೀವನ ಸಮಾಜ ಸುಧಾರಣೆಗೆ ಮುಡಿಪು’

Published 10 ಮಾರ್ಚ್ 2024, 14:20 IST
Last Updated 10 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ಬೀಳಗಿ: ಶರಣ ಕಡಕೋಳದ ಮಡಿವಾಳಪ್ಪನವರ ಜೀವನ ಯಾವಾಗಲೂ ಸಮಾಜದ ಸುಧಾರಣೆ ಮತ್ತು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಮುಡಿಪಾಗಿತ್ತು ಎಂದು ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹುಚ್ಚೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರವಚನ ಕಾರ್ಯಕ್ರಮದಲ್ಲಿ ಸರ್ಕಾರಿ ವಕೀಲರಾಗಿ ನಿಯುಕ್ತಿಯಾಗಿರುವ ಜಗತ್ ಕಣವಿ, ಪಿ.ಎಚ್.ಡಿ. ಪಡೆದಿರುವ ಪ್ರತಿಭಾ ಚೇತನ ರಾಮಗಿರಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಬ್ದುಲ್ ಬಾಶಿತ್ ಸೋಲಾಪುರ ಅವರನ್ನು ಸನ್ಮಾನಿಸಲಾಯಿತು.

ಹುಚ್ಚೇಶ್ವರ ಮಠದ ಸಿದ್ಧಯ್ಯ ಸ್ವಾಮೀಜಿ, ಫಕೀರಯ್ಯ ಸ್ವಾಮಿಜಿ, ಪ್ರವಚನಕಾರ ವೀರಭದ್ರಯ್ಯ ಶಾಸ್ತ್ರಿ ಇದ್ದರು. ಶಿಕ್ಷಕ ವಿಠ್ಠಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT