ಮಂಗಳವಾರ, ಮಾರ್ಚ್ 28, 2023
31 °C

ವಸತಿ ಶಾಲೆ ಸ್ಯಾನಿಟೈಸ್ ಕಡ್ಡಾಯ: ವಸತಿ ಶಿಕ್ಷಣ ಸಂಸ್ಥೆ ಆಡಳಿತ ವಿಭಾಗದ ನಿರ್ದೇಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕೋವಿಡ್ ಮೂರನೇ ಅಲೆ ಹರಡದಂತೆ ವಸತಿ ಶಾಲೆಗಳಲ್ಲಿ ಪ್ರತಿವಾರ ಕಡ್ಡಾಯವಾಗಿ ಸಾನಿಟೈಸ್ ಮಾಡುವಂತೆ ಪ್ರಾಂಶುಪಾಲರು ಮತ್ತು ನಿಲಯ ಪಾಲಕರಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಆಡಳಿತ ವಿಭಾಗದ ನಿರ್ದೇಶಕ ಶಿವಾನಂದ ಕುಂಬಾರ ಸೂಚನೆ ನೀಡಿದರು.

ನವನಗರದ ಮುಚಖಂಡಿ ಮುರಾರ್ಜಿ ಪದವಿ ವಿಜ್ಞಾನ ಕಾಲೇಜಿನಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಯ ವಸತಿ ಶಾಲೆ ಪ್ರಾಂಶುಪಾಲರು ಮತ್ತು ನಿಲಯ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಾಂಶುಪಾಲರು, ಶಿಕ್ಷಕರು ಮತ್ತು ನಿಲಯಪಾಲಕರು ಪರಸ್ಪರ ಸಹಕಾರ ದಿಂದ ವಸತಿ ಶಾಲೆಯ ಆವರಣವನ್ನು ಶುಚಿಯಾಗಿಟ್ಟುಕೊಳ್ಳ ಬೇಕು. ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂದರು.

‘ಮೊರಾರ್ಜಿ ಶಾಲೆಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದು, ಇನ್ನೂ ಹೆಚ್ಚಿನ ಗುಣಮಟ್ಟದ ಫಲಿತಾಂಶ  ನಿರೀಕ್ಷಿಸುತ್ತೇವೆ. ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಮಾತಾಡುವ ಕೌಶಲವನ್ನು ಬೆಳೆಸಬೇಕು’ ಎಂದು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ‘ವಸತಿ ಶಾಲೆಯಲ್ಲಿ ಪ್ರತಿಯೊಬ್ಬರೂ ಕೋವಿಡ್ ನಿಯಮ ಪಾಲಿಸಬೇಕು’ ಎಂದರು.

ಶಿವಾನಂದ ಕುಂಬಾರ ಅವರನ್ನು ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆ ಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರ, ನಿಲಯಪಾಲಕರ ಅಹವಾಲು ಸ್ವೀಕರಿಸಲಾಯಿತು.

ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಂಜುನಾಥ ಡೊಂಬರ, ಪ್ರಾಂಶುಪಾಲರಾದ ಭಾರತಿ ಸಜ್ಜನ, ಜಿಲ್ಲಾ ಸಮನ್ವಯಾಧಿಕಾರಿ ವಿಲಾಸ ಅಕ್ಕಿಮರಡಿ, ಸತೀಶ ಸಜ್ಜನ, ಲಕ್ಷ್ಮಣ ಎ. ಬಿರಾದಾರ, ಹರೀಶ ಹೊಸಮನಿ, ಎಸ್ ಜಿ ಹಿರೇಮಠ, ಅಮರೇಶ ಬೆಳ್ಳಿಹಾಳ, ಶಿಕ್ಷಕ ಶಿವಾನಂದ ನಂದೆಪ್ಪಗೋಳ, ರವೀಂದ್ರ ಬಂಥನಾಳ,  ಬಿ.ವೈ. ಕ್ವಾಟಿ, ಮಂಜುನಾಥ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು