ಕೂಡಲಸಂಗಮ: ‘ಎಸ್ಎಸ್ಎಲ್ಸಿ ಉತ್ತಮ ಫಲಿತಾಂಶಕ್ಕಾಗಿ ಸಂಗಮ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ ಹೇಳಿದರು.

ಕೂಡಲಸಂಗಮ ಸರ್ಕಾರಿ ಪ್ರೌಢಯಲ್ಲಿ ಎಸ್ಎಸ್ಎಲ್ಸಿ ಉತ್ತಮ ಫಲಿತಾಂಶಕ್ಕಾಗಿ ಬುಧವಾರ ನಡೆದ ಸಂಗಮ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮಕ್ಕಳ ಉತ್ತಮ ಫಲಿತಾಂಶಕ್ಕೆ ಇಂತಹ ಕಾರ್ಯಕ್ರಮಗಳು ನಡೆಯಬೇಕು, ಇದರಿಂದ ವಿದ್ಯಾರ್ಥಿಗಳಿಗೆ ಇರುವ ಎಲ್ಲ ಗೊಂದಲಗಳು ನಿವಾರಣೆಯಾಗುತ್ತವೆ’ ಎಂದರು.

‘ಆರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ನಿತ್ಯ ಒಂದು ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಪಾಠ ಭೋದನೆ, ಉತ್ತಮ ಫಲಿತಾಂಶಕ್ಕೆ ಸರಳ ತಂತ್ರಗಳು, 100ಕ್ಕೆ 100 ಫಲಿತಾಂಶ ಪಡೆಯಲು ಅನುಸರಿಸುವ ತಂತ್ರಗಳ ಕುರಿತು ಸಮಗ್ರ ಮಾಹಿತಿ ದೊರೆಯುವುದು. ಕಳೆದ 8 ವರ್ಷ ದಿಂದ ಈ ಶಾಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ವರ್ಷ ದಿಂದ ವರ್ಷಕ್ಕೆ ಫಲಿತಾಂಶ ಹೆಚ್ಚಾಗಿದೆ, ಮಕ್ಕಳ ದಾಖಲಾತಿಯು ಹೆಚ್ಚಿದೆ’ ಎಂದು ತಿಳಿಸಿದರು.

ಮುಖ್ಯಶಿಕ್ಷಕಿ ಎಸ್.ಬಿ.ಇಟಿ ಮಾತಾನಾಡಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಸರಣಿ 1, 2ರಲ್ಲಿ ಉತ್ತಮ ಅಂಕ ಪಡೆದಿದ್ದು, ಅಧಿಕ ಅಂಕ ಪಡೆಯಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಕೆರಕ್ಕಲಮಟ್ಟಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಪಿ.ಬಿ.ಭಜಂತ್ರಿ ಕನ್ನಡ ವಿಷಯದ ಕುರಿತು ಬೋಧಿಸಿ, ಮಕ್ಕಳೊಂದಿಗೆ ಚರ್ಚಿಸಿದರು. ಸಮಾರಂಭದಲ್ಲಿ ಎಸ್ಡಿಎಂಸಿ ಸದಸ್ಯ ಬಸಯ್ಯ ರೇವಡಿಹಾಳ, ಶಿಕ್ಷಕರಾದ ಎಚ್.ಡಿ.ಬಡಿಗೇರ, ಬಿ.ಎಸ್.ಕುಂಬಾರ, ಡಿ.ಬಿ.ನಧಾಪ, ಎಸ್.ಎಂ.ದೇವರಡ್ಡಿ, ಎಸ್.ಎಲ್.ಪಾಟೀಲ, ಎಚ್.ಕೆ.ಪುರದ, ಜಿ.ಆರ್.ಗಿರಿಜಾ, ಆರ್.ಎ.ತಂಬಾಕದ ಇದ್ದರು.

ಬಹುಮಾನ: ಎಸ್ಎಸ್ಎಲ್ಸಿ 2ನೇ ಸರಣಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ 20 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.