ಶುಕ್ರವಾರ, ಜುಲೈ 1, 2022
24 °C
ಬಾದಾಮಿ ತಾಲ್ಲೂಕಿನ ಕಾತರಕಿಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯ

ಮತ್ತೆ ಸಿಎಂ ಆದರೆ 10 ಕೆ.ಜಿ ಅಕ್ಕಿ ಕೊಡುವೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: 'ಮತ್ತೆ ನಮ್ಮ ಸರ್ಕಾರ ಬಂದು, ನಾನು ಸಿಎಂ ಆದರೆ ನಿಮಗೆ 10 ಕೆ.ಜಿ ಅಕ್ಕಿ ಕೊಡುವೆ‘ ಎಂದು ವಿಧಾನಸಭೆ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿ ತಾಲ್ಲೂಕಿನ ಕಾತರಕಿ ಗ್ರಾಮದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಈಗಲೂ ಎಲ್ಲರಿಗೂ ಅಕ್ಕಿ ಕೊಡ್ತಿದಾರಾ ಎಂದು ಪ್ರಶ್ನಿಸಿದರು. ಕಡಿಮೆ ಮಾಡಿದ್ದಾರೆ ಎಂಬ ಉತ್ತರ ಬರುತ್ತಿದ್ದಂತೆಯೇ ಅದೇಕೆ 3 ಕೆ.ಜಿ ಹೆಚ್ಚಾಗುತ್ತೇ ಅಂತ ಕಡಿಮೆ ಮಾಡಿದ್ರಾ ಎಂದು ಪ್ರಶ್ನಿಸಿದರು.

ಜನರು ಯಾರೂ ಹಸಿವಿನಿಂದ ಮಲಗಬಾರದು, ಹೊಟ್ಟೆ ತುಂಬ ಊಟ ಮಾಡಬೇಕು. ಬರಗಾಲ, ಪ್ರವಾಹ ಬಂದ್ರೆ ಏನೇ ಇದ್ರೂ ಹೊಟ್ಟೆ ತುಂಬ ಊಟ ಇದ್ರೆ ಜನ ನೆಮ್ಮದಿಯಾಗಿ ಇತಾ೯ರೆ. ಇದೊಂದು ದುಡ್ಡಿಲ್ಲದ ದರಿದ್ರ ಸಕಾ೯ರ. ಸಂಬಳ ಕೊಡೋಕೆ ಸಕಾ೯ರದ ಬಳಿ ದುಡ್ಡಿಲ್ಲ. ನಾನು ಸಿಎಂ ಆಗಿದ್ದಾಗ ಖಜಾನೆ ಯಾವಾಗಲೂ ಭತಿ೯ ಆಗಿರುತ್ತಿತ್ತು..ಈಗ ದುಡ್ಡೇ ಇಲ್ಲ ಅಂತಿದ್ದಾರೆ. ಯಡಿಯೂರಪ್ಪ ಸಿಎಂ ಆದಮೇಲೆ ಒಂದು ಪೈಸೇನೂ ಇಲ್ಲ ಎಂದು ವ್ಯಂಗ್ಯವಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು