ಗುಳೇದಗುಡ್ಡ: ಪಟ್ಟಣದ ನೆಹರೂ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ಗುರುವಾರ ಅಂತರರಾಷ್ಟ್ರೀಯ ಮಾದಕ ವಸ್ತು ಮುಕ್ತ ದಿನದ ಅಂಗವಾಗಿ ಬೀದಿ ನಾಟಕ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಪಟ್ಟಣದಲ್ಲಿ ಗುರುವಾರ ಭಾರತ ಮಾರ್ಕೆಟ್, ಹಾದಿ ಬಸವೇಶ್ವರ ದೇವಸ್ಥಾನದ ಸರ್ಕಲ್, ಪುರಸಭೆ ಎದುರುಗಡೆ ಮಾದಕ ದೃವ್ಯಗಳಾದ ಗಾಂಜಾ, ಅಫೀಮ,ಸರಾಯಿ ಮುಂತಾದವುಗಳನ್ನು ಸೇವಿಸುವ ಮೂಲಕ ವ್ಯಸನಿಗಳಾಗುತ್ತಿದ್ದು ಸಮಾಜಕ್ಕೆ ಅಂತವರು ಮಾರಕವಾಗುವ ಬಗೆಯನ್ನು ವಿದ್ಯಾರ್ಥಿಗಳ ಕಿರು ಬೀದಿ ನಾಟಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.ನಂತರ ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪ್ರಾಚಾರ್ಯ ಮಹೇಶ ಸರೋದೆ,ಸಹ ಶಿಕ್ಷಕರಾದ ಮುತ್ತುಸ್ವಾಮಿ ದೇವಾಂಗಮಠ,ಸಿಕಂದರ ಪೆಂಡಾರಿ, ಸುಹಾನ್ ಒಮಟಿ, ಭೀಮಪ್ಪ ರಾಠೋಡ ಇದ್ದರು.

ಗುರುಸಿದ್ದೇಶ್ವರ ಮಹಿಳಾ ಬಿಎಡ್ ಕಾಲೇಜು : ಪಟ್ಟಣದ ಗುರುಸಿದ್ದೇಶ್ವರ ಮಹಿಳಾ ಬಿಎಡ್ ಕಾಲೇಜಿನಲ್ಲಿ ಮಾದಕ ದೃವ್ಯ ವ್ಯಸನ ಮುಕ್ತ ದಿನದ ಪ್ರಯುಕ್ತ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಪ್ರಾಚಾರ್ಯರು ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.