ಬಾಗಲಕೋಟೆ: ಬಿವಿವಿ ಸಂಘದ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಶಿಷ್ಯೋಪನಯನ ಮತ್ತು ಫ್ರೆಶರ್ಸ್ ದಿನವನ್ನು ಗುರುಕುಲ ಪದ್ಧತಿಯಂತೆ ಆಚರಿಸಲಾಯಿತು.

ಧನ್ವಂತರಿ ಹೋಮ, ಸತ್ಯನಾರಾಯಣ ಪೂಜೆ, ಧನ್ವಂತರಿದೇವಿಗೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ಶಿಕ್ಷಕರು ಕಂಕಣಧಾರಣ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ಆಯುರ್ವೇದ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ವಿದ್ಯಾರ್ಥಿಗಳು ನೈತಿಕತೆ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.

ಆಡಳಿತ ಮಂಡಳಿ ಸದಸ್ಯರಾದ ಚಂದ್ರಶೇಖರ ಶೆಟ್ಟರ್, ಶರಣಪ್ಪ ರುದ್ರಾಕ್ಷಿ, ಪ್ರಾಚಾರ್ಯ ಎಂ.ಎಸ್. ಹಿರೇಮಠ, ಡಾ.ಆರ್.ಐ. ಜಂಬಗಿ, ಡಾ.ಪ್ರಕಾಶ ದೇಶಪಾಂಡೆ, ಡಾ.ವಿ.ಎಸ್. ಚೌದರಿ, ಡಾ.ರವಿ ಹೊಸಮನಿ ಇದ್ದರು.

ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಪ್ರಾಚಾರ್ಯ ಡಾ.ವೀಣಾ ಯಲವಿಗಿ ಮಾತನಾಡಿ, ಮಣ್ಣು, ವಾಯು, ಜಲ, ಮ್ಯಾಗ್ನೆಟ್ ಥೆರಪಿ, ಅಕ್ಯುಪಂಕ್ಚರ್, ಅಕ್ಯುಪ್ರೆಶರ್, ಸೇರಿದಂತೆ ವಿವಿಧ ಚಿಕಿತ್ಸೆಗಳು ಲಭ್ಯ ಇವೆ. ಆರೋಗ್ಯಕರ ಜೀವನಶೈಲಿಯ ಬಗ್ಗೆ ಶಿಕ್ಷಣ ನೀಡುವ ಮಾರ್ಗವಾಗಿದೆ. ಈಚಿನ ದಿನಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ ಎಂದರು.

ಸದಸ್ಯರಾದ ಚಂದ್ರಶೇಖರ ಶೆಟ್ಟರ, ಶರಣಪ್ಪ ರುದ್ರಾಕ್ಷಿ, ಡಾ.ಐಶ್ವರ್ಯ, ಡಾ.ಶೃತಿ, ಡಾ.ಅಲತಾಫ್, ಡಾ.ವಿನಾಯಕ, ಡಾ.ಅಭಿಷೇಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.