ಮುಧೋಳ: ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸೇವಕ ಟಿ.ವಿ.ಅರಳಿಕಟ್ಟಿಯವರ ಕಾರ್ಯ ಸಮಾಜಕ್ಕೆ ಮಾದರಿಯಾದದು ಎಂದು ನಟ ನಿರ್ದೇಶಕ ತರುಣ ಸುಧೀರ ಹೇಳಿದರು.

ಅವರು ಶನಿವಾರ ರಾತ್ರಿ ನಗರದ ಮುಧೋಳ ರಾಯಲ್ ಸ್ಕೂಲ್ನಲ್ಲಿ ನಡೆಯುತ್ತಿರುವ ಆವಿಷ್ಕಾರ-5 ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ತರುಣ್ ಸುಧೀರ ಅವರ ಪತ್ನಿ ಸೋನಲ್ ಅವರು ಮಾತನಾಡಿ, ಪಾಲಕರು ಮಕ್ಕಳಿಗೆ ಪ್ರತಿಯೊಂದು ಕಾರ್ಯದಲ್ಲೂ ಬೆನ್ನೆಲುಬಾಗಿ ನಿಲ್ಲಬೇಕು. ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ನಗರ ಪ್ರದೇಶದಲ್ಲಿ ಸೌಲಭ್ಯ ಹೊಂದಿರುವ ಶಿಕ್ಷಣವನ್ನು ಸ್ಥಳೀಯ ಮಟ್ಟದಲ್ಲಿ ನೀಡುತ್ತಿರುವ ಅರಳಿಕಟ್ಟಿ ಅವರ ಸೇವೆ ಅನುಕರಣೀಯ ಎಂದರು.

ಗುಣಮಟ್ಟದ ಶಿಕ್ಷಣಕ್ಕಾಗಿ ಹಳ್ಳಿ ಜನರು ತಮ್ಮ ಮಕ್ಕಳನ್ನು ಊಟಿ, ಮಂಗಳೂರಿನಂತಹ ನಗರಕ್ಕೆ ಕಳುಹಿಸುವ ಅನಿವಾರ್ಯತೆ ಇತ್ತು. ಆದರೆ ಅರಳಿಕಟ್ಟಿಯಂತಹ ಸೇವಾ ಮನೋಭಾವದ ವ್ಯಕ್ತಿಗಳಿಂದ ನಮ್ಮ ಮಕ್ಕಳಿಗೂ ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದು ಹೆಚ್ಚು ಸಂತಸವನ್ನುಂಟು ಮಾಡುತ್ತಿದೆ ಎಂದರು.

ಎಂಆರ್ ಎನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ಶಿಕ್ಷಣ ಪ್ರೇಮಿ ಬಸವರಾಜ ಕೊಣ್ಣೂರ, ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ಅರಳಿಕಟ್ಟಿ, ತಿಮ್ಮಣ್ಣ ಅರಳಿಕಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಕಾರ್ಯದರ್ಶಿ ವಿನಾಯಕ ಅರಳಿಕಟ್ಟಿ, ಆಡಳಿತಾಧಿಕಾರಿ ಇಂದಿರಾ ಸಾತನೂರ, ಉಪಪ್ರಾಚಾರ್ಯ ಮಾರುತಿ ಪವಾರ ಇದ್ದರು. ಪ್ರಾಚಾರ್ಯ ಚಂದ್ರಶೇಖರ ನಾಗವಂತ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.