ಬುಧವಾರ, ಸೆಪ್ಟೆಂಬರ್ 23, 2020
26 °C

ಬಾಲಕಿಯರ ಪ್ರೌಢಶಾಲೆಗೆ ಶಿಕ್ಷಕಿಯಿಂದ ಟಿವಿ ಕೊಡುಗೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಳಕಲ್‍ : ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಳೆಯ ವಿದ್ಯಾರ್ಥಿ, ಸಮೀಪದ ಗುಗ್ಗಲಮರಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರೇಮಲತಾ ಬಗನಾಳ (ಗೋಟೂರ) ಅವರು ತಾವು ಕಲಿತ ಶಾಲೆಗೆ 36ಸಾವಿರ ರೂಪಾಯಿ ಮೌಲ್ಯದ 55 ಇಂಚಿನ ಟಿವಿ ದೇಣಿಗೆಯಾಗಿ ನೀಡಿದರು.

ವಿದ್ಯಾರ್ಥಿನಿಯರ ಕಲಿಕೆಗೆ ಟಿವಿ ಅಗತ್ಯವಿರುವುದನ್ನು ಮನಗಂಡು ಟಿವಿ ನೀಡಿದ್ದಾರೆ. ಕೋವಿಡ್‍ 19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಬೋಧನೆಯನ್ನು ಆನ್‍ಲೈನ್‍ ಹಾಗೂ ಚಂದನ ವಾಹಿನಿ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವುದಕ್ಕಾಗಿ ವಿದ್ಯುನ್ಮಾನ ಉಪಕರಣಗಳ ಅಗತ್ಯವನ್ನು ತಿಳಿದು ಈ ಕಾರ್ಯಕ್ಕೆ ಮುಂದಾದೆ ಎಂದು ಪ್ರೇಮಲತಾ ಹೇಳಿದರು. ಟಿವಿ ಸ್ವೀಕರಿಸಿದ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಅವರು ಪ್ರೇಮಲತಾ ಆವರಿಗೆ ಎಸ್‍ಡಿಎಂಸಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.