ಬಾಗಲಕೋಟೆ: ಇಲ್ಲಿನ ಐತಿಹಾಸಿಕ ಹೋಳಿ ಸಂಭ್ರಮಕ್ಕೆ ಭಾನುವಾರ ತೆರೆ ಬಿದ್ದಿತು. ಮೂರು ದಿನಗಳ ಕಾಲ ಅತ್ಯಂತ ವೈಭವದಿಂದ ಬಣ್ಣದಾಟ ನಡೆಯಿತು. ಮಕ್ಕಳು, ಯುವಕರು, ಹಿರಿಯರು ಪಾಲ್ಗೊಳ್ಳುವ ಮೂಲಕ ಬಣ್ಣದಾಟದ ರಂಗು ಹೆಚ್ಚಿಸಿದರು.

ಸಣ್ಣ–ಪುಟ್ಟ ಮಾತಿನ ಚಕಮಕಿ ಹೊರತುಪಡಿಸಿದರೆ ಹೋಳಿ ಹಬ್ಬ ಶಾಂತಿಯುತವಾಗಿ ನಡೆಯಿತು. ಜನರೂ ಸಂಭ್ರಮದಿಂದ ಪರಸ್ಪರ ಬಣ್ಣ ಎರಚಾಡಿದರು.

ಹಳೆಯ ಬಾಗಲಕೋಟೆಯಲ್ಲಿ ಮೂರನೇ ದಿನ ಬಣ್ಣದಾಟ ರಂಗೇರಿತ್ತು. ಶಿವರಾತ್ರಿ ಅಮವಾಸ್ಯೆಯಿಂದ ಹಲಗೆ ಸದ್ದಿನೊಂದಿಗೆ ಬಣ್ಣದಾಟ ದಿನದಿಂದ ದಿನಕ್ಕೆ ಮೆರುಗು ಪಡೆದಿತ್ತು.

ಕೊನೆಯ ದಿನವೂ ಬಾಗಲಕೋಟೆಯಲ್ಲಿ ರೇನ್ ಡ್ಯಾನ್ಸ್ ಇತ್ತು. ಯುವಕ, ಯುವತಿಯರು ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಎರಡು ದಿನಗಳಿಂದ ಮೇಲೆ ಮೆತ್ತಿಕೊಂಡಿದ್ದ ಬಣ್ಣದ ಮೇಲೆಯೇ ಮತ್ತೆ ಬಣ್ಣ ಹಚ್ಚಿ ಸಂಭ್ರಮಿಸಿದರು.

ನೂರಾರು ಟ್ರ್ಯಾಕ್ಟರ್ಗಳಲ್ಲಿ ಬ್ಯಾರಲ್ಗಳಲ್ಲಿ ಬಣ್ಣ ತುಂಬಿಕೊಂಡು ಕಿಲ್ಲಾ ಮೂಲಕ ಸಾಲಾಗಿ ಟ್ರ್ಯಾಕ್ಟರ್ಗಳು ಸಾಗಿದವು. ಪುನೀತ್ ರಾಜಕುಮಾರ್ ಫೋಟೊಗಳು ಅಲ್ಲಲ್ಲಿ ರಾರಾಜಿಸಿದವು. ವಿರಾಟ್ ಕೊಹ್ಲಿ ಫೋಟೊ ಹಿಡಿದುಕೊಂಡು ಟ್ರ್ಯಾಕ್ಟರ್ವೊಂದು ಮೆರವಣಿಗೆಯಲ್ಲಿತ್ತು.

ಟ್ರ್ಟಾಕ್ಟರ್ಗಳಲ್ಲಿದ್ದವರು ಬ್ಯಾರಲ್ಗಳಲ್ಲಿದ್ದ ಬಣ್ಣವನ್ನು ರಸ್ತೆ ಮೇಲಿದ್ದ ಯುವಕರಿಗೆ ಎರಚಿದರೆ, ಕೆಳಗಿದ್ದ ಯುವಕರು ಅಲ್ಲಿದ್ದ ಬ್ಯಾರೆಲ್ಗಳಲ್ಲಿ ಅಷ್ಟೇ ಜೋರಾಗಿ ಟ್ರ್ಯಾಕ್ಟರ್ಗಳಲ್ಲಿದ್ದವರತ್ತ ಎರಚುತ್ತಿದ್ದರು. ರಸ್ತೆ ಬದಿ, ಮನೆಯ ಮಾಳಿಗೆಯ ಮೇಲೆ ಕುಳಿತು ಮಹಿಳೆಯರು ವೀಕ್ಷಿಸುತ್ತಿದ್ದದ್ದು ಕಂಡು ಬಂದಿತು.

ಜೀವ ತುಂಬಿದ ಹಲಗೆ: ಬಾಗಲಕೋಟೆಯ ಬಣ್ಣದಾಟಕ್ಕೆ ಜೀವ ತುಂಬುವ ಕೆಲಸವನ್ನು ಹಲಗೆ ಮಾಡುತ್ತದೆ. ನಿತ್ಯ ಸಂಜೆ ಯುವಕರು ತಂಡಗಳಾಗಿ ವಿವಿಧೆಡೆ ಹಲಗೆ ಬಾರಿಸುವುದರ ಜತೆಗೆ ಅಲ್ಲಲ್ಲಿ ನಡೆಯುವ ಹಲಗೆ ಮೇಳಗಳು ಬಣ್ಣದಾಟದ ರಂಗು ಹೆಚ್ಚಿಸಿವೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು ಸಂಜೆ ಮನೆ ಆವರಣದಲ್ಲಿ ಬಣ್ಣದಾಟ ಏರ್ಪಡಿಸಿದ್ದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.