ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲದಿಂದ ಮನೆಗೆ ಹೋಗುತ್ತಿದ್ದವರ ಮೇಲೆ ಹರಿದ ಟಿಪ್ಪರ್: ಒಂದೇ ಕುಟುಂಬದ ಐವರ ಸಾವು

ಬಾಗಲಕೋಟೆ ಜಿಲ್ಲೆಯ ಬೀಳಗಿ ಬಳಿ ಘಟನೆ
Published 14 ಏಪ್ರಿಲ್ 2024, 17:15 IST
Last Updated 14 ಏಪ್ರಿಲ್ 2024, 17:15 IST
ಅಕ್ಷರ ಗಾತ್ರ

ಬಾಗಲಕೋಟೆ: ಭಾನುವಾರ ಸಂಜೆ ಬೀಳಗಿ ತಾಲ್ಲೂಕಿನ ಹೊನ್ನಿಹಾಳ ಸಮೀಪದ ಕಟ್ಟಿಗ್ಯಾನಮಡ್ಡಿ ಸಮೀಪದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಬಾದರದಿನ್ನಿ ಗ್ರಾಮದ ವೆಂಕಪ್ಪ ಶಿವಪ್ಪ ತೋಳಮಟ್ಟಿ(70) ಯಲ್ಲವ್ವ ವೆಂಕಪ್ಪ ತೋಳಮಟ್ಟಿ(60) ಪುಂಡಲೀಕ್ ವೆಂಕಪ್ಪ ತೋಳಮಟ್ಟಿ(35), ಗಿರಿಸಾಗತ ನಿವಾಸಿ ವೆಂಕಪ್ಪ ಅವರ ಅಳಿಯ ಅಶೋಕ ನಿಂಗಪ್ಪ ಬೊಮ್ಮಣ್ಣವರ( 45) (ಅಳಿಯ) , ಅಶೋಕ ಪತ್ನಿ ನಾಗವ್ವ ಅಶೋಕ (40) ಮೃತರು

ಹೊಲದ ಕೆಲಸ ಮುಗಿಸಿಕೊಂಡು ಮನೆಗೆ‌ ಮರಳುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಟಿಪ್ಪರ್ ಟಯರ್ ಸ್ಫೋಟವಾಗಿ ಇವರ ಮೇಲೆ ಹಾಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT