ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ವೀರಭದ್ರೇಶ್ವರ ಕಾರ್ತಿಕೋತ್ಸವ

Last Updated 21 ಡಿಸೆಂಬರ್ 2021, 5:18 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ವೀರಭದ್ರೇಶ್ವರ ಕಾರ್ತೀಕೋತ್ಸವ ಸೋಮವಾರ ಸಂಭ್ರಮ– ಸಡಗರದಿಂದ ನಡೆಯಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ಬಿಲ್ವಪತ್ರೆ ಅರ್ಚನೆ ನಡೆಯಿತು. ನಂತರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಬೆಳ್ಳಿ ಪೂಜೆ ಭಕ್ತರ ಗಮನ ಸೆಳೆಯಿತು. ನಂತರ ಅಗ್ನಿಕುಂಡ ಉತ್ಸವ ನಡೆಯಿತು. ವೀರಭದ್ರೇಶ್ವರರ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳದೊಂದಿಗೆ ನಡೆಯಿತು.

ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಪುರುವಂತರು ವೀರಗಾಸೆ ಪ್ರದರ್ಶನ ನೀಡಿದರು. ನಂದಿಕೋಲ
ಹೊತ್ತವರು, ಪಲ್ಲಕ್ಕಿ ಹೊತ್ತುಕೊಂಡ ಬಂದ ಭಕ್ತರು, ಪುರುವಂತರು ಪಲ್ಲಕ್ಕಿ ಸಮೇತವಾಗಿ ಅಗ್ನಿಕುಂಡ ಪ್ರವೇಶದ ನಂತರ ನೂರಾರು ಜನ ಭಕ್ತರು ಅಗ್ನಿಕುಂಡ ಹಾಯ್ದು ಹರಕೆಯನ್ನು ಪೂರೈಸಿದರು.

ಶ‍್ರೀಶೈಲ ಧಬಾಡಿ, ಬಸವರಾಜ ಪಟ್ಟಣ, ರೇವಣಪ್ಪ ಶಿವಸಿಂಪಿ, ರಾಜಶೇಖರ ಗಂಜ್ಯಾಳ, ಈರಪ್ಪ ಗಂಜ್ಯಾಳ, ಶಂಕರ ಜುಂಜಪ್ಪನವರ, ಈಶ್ವರ ಗೆದ್ದೆಪ್ಪನವರ, ಮಲ್ಲಪ್ಪ ಬಡಿಗೇರ, ಮಲ್ಲಪ್ಪ ಗೇಣಿ, ಪಂಡಿತಪ್ಪ ಪಟ್ಟಣ, ಶ್ರೀಪಾದ ಬಾಣಕಾರ, ಮಲ್ಲಣ್ಣ ಬಾವಲತ್ತಿ, ಶಿವು ಬಾಗೇವಾಡಿ, ದಾನಪ್ಪ ಹುಲಜತ್ತಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT