ಬಿಳಿ ಸಮವಸ್ತ್ರ ಧರಿಸಿ ಬಂದಿಲ್ಲ ಎಂದು ಗ್ರಾಮಸ್ಥರಿಗೆ ಯೋಗಕ್ಕೆ ನಿರಾಕರಣೆ!

ಬಾಗಲಕೋಟೆ: ಬಿಳಿ ಸಮವಸ್ತ್ರ ಧರಿಸಿ ಬಂದಿಲ್ಲ ಎಂದು ಪಟ್ಟದಕಲ್ಲಿನಲ್ಲಿ ಆಯೋಜಿಸಿರುವ ಯೋಗ ಕಾರ್ಯಕ್ರಮಕ್ಕೆ ಸ್ಥಳೀಯ ನಿವಾಸಿಗಳಿಗೆ ಅವಕಾಶ ನಿರಾಕರಿಸಿದ್ದಕ್ಕೆ ಪ್ರತಿಭಟನೆ ಮಾಡಿದರು.
ಗ್ರಾಮದಲ್ಲಿ ಡಂಗುರ ಹೊಡೆದು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಗಿತ್ತು. ಆದರೆ, ಈಗ ಬಿಳಿ ಟೀ ಶರ್ಟ್ ಧರಿಸಿ ಬಂದಿಲ್ಲ ಎಂದು ಒಳಗೆ ಬಿಡುತ್ತಿಲ್ಲ ಎಂದು ನಿವಾಸಿ ಮಂಜುನಾಥ ಮತ್ತಿತರರು ದೂರಿದರು.
ಬಿಳಿ ಸಮವಸ್ತ್ರ ಧರಿಸಿ ಬಂದವರನ್ನು ಮಾತ್ರ ಪೊಲೀಸರು ಒಳಗೆ ಬಿಡುತ್ತಿದ್ದಾರೆ.
ಅಂತರರಾಷ್ಟ್ರೀಯ ಯೋಗ ದಿನ | ಯೋಗದಿಂದ ನಿರೋಗ ಸಾಧ್ಯ; ಮೈಸೂರಿನಲ್ಲಿ ಪ್ರಧಾನಿ ಮೋದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.