ಭಾನುವಾರ, ಫೆಬ್ರವರಿ 23, 2020
19 °C
ಸಿದ್ದರಾಮಯ್ಯ ಬೇಗನೇ ಗುಣಮುಖರಾಗಲು ಬನಶಂಕರಿ ದೇವಿಗೆ ವಿಶೇಷ ಪೂಜೆ

ಅಭಿಮಾನಿಯಿಂದ ದೀಡ್ ನಮಸ್ಕಾರ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬನಶಂಕರಿ (ಬಾದಾಮಿ) : ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಬೇಗನೇ ಗುಣಮುಖರಾಗಲಿ ಎಂದು ಹಾರೈಸಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ ದಡ್ಡಿ ನೇತೃತ್ವದಲ್ಲಿ ಅವರ ಅಭಿಮಾನಿಗಳು ಬನಶಂಕರಿ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.

ಸಿದ್ದರಾಮಯ್ಯ ಅಭಿಮಾನಿ ತಾಲ್ಲೂಕಿನ ಹಿರೇಬೂದಿಹಾಳ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ ರಂಗಪ್ಪ ಮೊಕಾಶಿ ಇಲ್ಲಿನ ಹರಿದ್ರಾತೀರ್ಥ ಪುಷ್ಕರಣಿಯಿಂದ ದೇವಾಲಯದವರೆಗೆ ದೀಡ್‌ನಮಸ್ಕಾರ ಹಾಕಿ ದೇವಿಗೆ ಪೂಜೆ ಸಲ್ಲಿಸಿದರು.

ರಂಗಪ್ಪ ಮೊಕಾಶಿ ದೀಡ್ ನಮಸ್ಕಾರ ಹಾಕುವಾಗ ಹಿಂದೆ ಅಭಿಮಾನಿಗಳು ಕೈಯಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಿಡಿದುಕೊಂಡಿದ್ದರು.

ಮುಖಂಡರಾದ ಭೀಮಪ್ಪ ಬಂದಕೇರಿ, ರಂಗಪ್ಪ ಹೂಲಗೇರಿ, ತಿಪ್ಪಣ್ಣ ಜೋಗಣ್ಣವರ, ಹನುಮಂತ ಮುಚ್ಚಳಗುಡ್ಡ, ಹನುಮಂತ ಖಾನಗೌಡ್ರ, ಶ್ರೀಕಾಂತ ಪೂಜಾರ, ಭೀಮಣ್ಣ ಆಡಗಲ್ ಇದ್ದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು