ಬಾಗಲಕೋಟೆ: ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಇಲಾಖೆಗೆ ಉತ್ತಮ ಹೆಸರು ತರಬೇಕು ಎಂದು ಡಿವೈಎಸ್ಪಿ ವಿಠ್ಠಲ ಜಗಲಿ ನೀಡಿದರು. ನವನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಪದೋನ್ನತಿ ಹೊಂದಿದ ಅಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯವರು ಸಾರ್ವಜನಿಕರೊಂದಿಗೆ ಒಳ್ಳೆಯ ಸಂಪರ್ಕ ಹೊಂದಿರಬೇಕು. ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ವೃತ್ತಿಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ಇದಕ್ಕೂ ಮುನ್ನ ಪೊಲೀಸ್ ಪರೇಡ್ ಮೈದಾನದಲ್ಲಿ ಇಲಾಖೆಯ ಸಿಬ್ಬಂದಿ ಆಕರ್ಷಕ ಪಥಸಂಚಲನ ನಡೆಸಿದರು. ಬಳಿಕ ಪದೋನ್ನತಿ ಹೊಂದಿದವರಿಗೆ ಬ್ಯಾಜ್ ನೀಡಿ ಸನ್ಮಾನಿಸಲಾಯಿತು.

ಪದೋನ್ನತಿ ಹೊಂದಿದವರು: ನವನಗರ ಪೊಲೀಸ್ ಠಾಣೆಯ ಟಿ.ಎಸ್. ಮಜ್ಜಗಿ, ಬೀಳಗಿಯ ಆರ್.ಎಸ್. ಪಾಟೀಲ, ಬಾಗಲಕೋಟೆ ಶಹರ ಠಾಣೆಯ ಎಸ್.ಬೇತ್, ಮುಧೋಳದ ವಿ.ವಿ. ಸಾಲಗುಂದಿ, ಅಮೀನಗಡದ ಎಂ.ಬಿ. ಗಣಾಚಾರಿ, ಕಲಾದಗಿಯ ವಿ.ಜಿ. ಪೂಜಾರಿ, ಬಾಗಲಕೋಟೆ ಹೆಸ್ಕಾಂ ಘಟಕದ ಡಿ.ಎಸ್. ಮೇತ್ರಿ, ಜಮಖಂಡಿಯ ಎಂ.ವೈ. ಕಲಾದಗಿ ಅವರು ಪದೋನ್ನತಿ ಹೊಂದಿದರು.

ಡಿವೈಎಸ್ಪಿ ಚಿಟಗುಪ್ಪಿ, ಸಿಪಿಐ ಶಿವಶಂಕರ ಗಣಾಚಾರಿ, ಪಿಎಸ್ಐ ಧೂಳಖೇಡ, ರಮೇಶ ಕಾಂಬಳೆ, ಬಸವರಾಜ ಲಮಾಣಿ, ಚಂದ್ರಶೇಖರ ಮಠಪತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.