ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಕ್ಕಲಕೋಟೆ: 22 ಬಾಕ್ಸ್ ಅಕ್ರಮ ಮದ್ಯ ವಶ

Published 3 ಜೂನ್ 2023, 16:22 IST
Last Updated 3 ಜೂನ್ 2023, 16:22 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಸಮೀಪದ ಹಚ್ಚೋಳ್ಳಿ ಸಮೀಪದ ಚಳ್ಳೆಕೂಡ್ಲೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ಪಿ ವೆಂಕಟೇಶ ಅವರ ನೇತೃತ್ವದ ತಂಡ ದಾಳಿ ನಡೆಸಿ 22 ಬಾಕ್ಸ್‌ಗಳಲ್ಲಿದ್ದ ₹ 75 ಸಾವಿರ ಮೌಲ್ಯದ 190 ಲೀಟರ್ ಮದ್ಯ ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಚಳ್ಳೆಕೂಡ್ಲೂರು ಗ್ರಾಮದ ಅಯ್ಯಪ್ಪ ತಲೆಮರೆಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಹಚ್ಚೋಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಹುಸೇನಪ್ಪ, ಅಪರಾಧ ವಿಭಾಗದ ಪಿಎಸ್ಐ ಗೌಸ್ ಮೊಹಿದ್ದೀನ್ ಹಾಗೂ ಸಿಬ್ಬಂದಿ ಗುರು ಬಸವರಾಜ, ಯಶವಂತ್, ಮಂಜುನಾಥ, ಭೋಗರಾಜ, ಘನಮೂರ್ತಿ, ಗಂಗಾಧರ ವಾಹನ ಚಾಲಕ ಪಂಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT