ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹8 ಲಕ್ಷ ಮೌಲ್ಯದ 330 ಚೀಲ ಭತ್ತದ ಚೀಲ ಕಳ್ಳತನ

Published 3 ಜುಲೈ 2024, 14:53 IST
Last Updated 3 ಜುಲೈ 2024, 14:53 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಸಮೀಪದ ಸಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳೂರು ಗ್ರಾಮದ ಬಳಿಯ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಭತ್ತ ತುಂಬಿದ ಚೀಲಗಳ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿರುಗುಪ್ಪ ಪೊಲೀಸ್ ಉಪಾಧೀಕ್ಷಕ ವೆಂಕಟೇಶ್, ತೆಕ್ಕಲಕೋಟೆ ವೃತ್ತ ನಿರೀಕ್ಷಕ ಸುಂದರೇಶ್ ಕೆ ಹೊಳೆಣ್ಣವರ್, ಪಿಎಸ್‌ಐ (ಕಾ-ಸು) ಶಾಂತಮೂರ್ತಿ, ಸಿರಿಗೇರಿ ಠಾಣೆಯ ಪಿಎಸ್‌ಐ (ತನಿಖೆ) ಶ್ರೀನಿವಾಸ ಇವರ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿ ಆರೋಪಿ ಚಿತ್ರದುರ್ಗ ಜಿಲ್ಲೆಯ ಚಿಪ್ಪಿನಕೆರೆ ಗ್ರಾಮದ ಮುದ್ದುರಾಜನನ್ನು ಬಂಧಿಸಿ ₹ 8 ಲಕ್ಷ ಮೌಲ್ಯದ 330 ಚೀಲ ಭತ್ತ ತುಂಬಿದ ಚೀಲ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಕಳೆದ ವರ್ಷ ಜುಲೈ 23ರಂದು ಪ್ರಕರಣ ದಾಖಲಾಗಿತ್ತು.

ದಾಳಿಯ ಸಂದರ್ಭದಲ್ಲಿ ತೆಕ್ಕಲಕೋಟೆ ಪೊಲೀಸರಾದ ನಾಗರಾಜ, ರಾಮದಾಸ್, ಅಯ್ಯಪ್ಪ, ಬಿ, ಕಾಸೀಮಸ್ತಾ ವಾಲೀಕಾರ್, ಚಂದ್ರಶೇಖರ್ ಸ್ವಾಮಿ ಎಆರ್‌ಎಸ್‌ಐ ಹಾಗು ಮೋಕಾ ಪೊಲೀಸ್ ಠಾಣೆಯ ಅನ್ವರ್ ಬಾಷಾ, ಸಿರಿಗೇರಿ ಪೊಲೀಸ್ ಠಾಣೆಯ ರಾಮಾಂಜಿನಿ, ವಿನೋದ್‌ಗೌಡ, ಅಮರೇಶ, ಪ್ರಭಾಕರ ಭಾಗವಹಿಸಿದ್ದರು.

ಪೊಲೀಸರ ಈ ಕಾರ್ಯವನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT