ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಬೆಳೆ ಪದ್ಧತಿ ಅನುಸರಿಸಲು ಸಲಹೆ 

Published 23 ಡಿಸೆಂಬರ್ 2023, 15:42 IST
Last Updated 23 ಡಿಸೆಂಬರ್ 2023, 15:42 IST
ಅಕ್ಷರ ಗಾತ್ರ

ಕಂಪ್ಲಿ: ರೈತರು ಒಂದೇ ಬೆಳೆಗೆ ಸೀಮಿತವಾಗದೆ ಬಹುಬೆಳೆ ಪದ್ಧತಿ ರೂಢಿಸಿಕೊಳ್ಳುವುದರಿಂದ ಕೃಷಿಯಲ್ಲಿ ಉತ್ತಮ ಆದಾಯ ಪಡೆಯಬಹುದು ಎಂದು ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಹೇಳಿದರು.

ಇಲ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆ ಆತ್ಮ ಯೋಜನೆಯಡಿ ರೈತ ದಿನಾಚರಣೆ, ಪ್ರಶಸ್ತಿ ವಿಜೇತ ಕೃಷಿಕರಿಗೆ ಸನ್ಮಾನ, ಪ್ರಗತಿಪರ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿ ಮೌಲಸಾಬ್ ಮಾತನಾಡಿ, ರೈತರು ಕೃಷಿಯೊಡನೆ ಉಪಕಸುಬುಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೋರಮಂಡಲ ಕಂಪನಿಯ ಬೇಸಾಯ ಶಾಸ್ತ್ರಜ್ಞ ಶ್ರೀನಿವಾಸ ಪೂಜಾರಿ, ಡಿಎಟಿಸಿ ಸಹಾಯಕ ನಿರ್ದೇಶಕಿ ಸಿ.ಆರ್.ಅಭಿಲಾಷ ಮಾತನಾಡಿದರು.

ಸಮಗ್ರ ಕೃಷಿಯಲ್ಲಿ ಜಿಲ್ಲಾ ಕೃಷಿಕ ಪ್ರಶಸ್ತಿ ಗಳಿಸಿದ ರಾಮಸಾಗರ ಜಿ. ಬಸವರಾಜ, ತೋಟಗಾರಿಕೆಯಲ್ಲಿ ತಾಲ್ಲೂಕು ಪ್ರಶಸ್ತಿ ಗಳಿಸಿದ ಎಮ್ಮಿಗನೂರು ಎ. ಬನಶಂಕರಿ ಮತ್ತು ಉತ್ತಮ ಬಾಳೆ ಬೆಳೆದ ಪ್ರಗತಿಪರ ರೈತ ರಾಮಸಾಗರದ ಕುರುಬರ ನಾಗಪ್ಪ ಅವರನ್ನು ಗೌರವಿಸಲಾಯಿತು.

ಕೃಷಿ ಅಧಿಕಾರಿ ಶ್ರೀಧರ್, ಶಿವಪ್ಪ ಬಾರಿಗಿಡದ, ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ, ನಗರ ಅಧ್ಯಕ್ಷ ಕೊಟ್ಟೂರು ರಮೇಶ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ರಾಮಚಂದ್ರ, ಎಟಿಎಂ ರೇಣುಕರಾಜ, ಎಎಒ ಜ್ಯೋತಿ, ಕೃಷಿ ಸಂಜೀವಿನಿ ತಾಂತ್ರಿಕ ಸಹಾಯಕ ನಾಗರಾಜ, ಅನುವುಗಾರರಾದ ಅಮರೇಗೌಡ, ಫಕ್ಕೀರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT