ತಾಲ್ಲೂಕಿನ ಗೆದ್ದಲಗಟ್ಟೆ ಗ್ರಾಮದ ಬಸವರಾಜ, ಅನೇಕ ವರ್ಷಗಳಿಂದ ಆಸ್ತಮ ಖಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಎದೆ ನೋವು ಬರುತ್ತಿತ್ತು. ಇದನ್ನು ತಾಳಲಾರದೆ ಸೆ.1ರಂದು ಮನೆಯಲ್ಲಿ ಅವರೇ ಕಾಳು ಗಿಡಕ್ಕೆ ಹೊಡೆಯುವ ಯಾವುದೋ ವಿಷ ಸೇವಿನೆ ಮಾಡಿ ಆಸ್ವಸ್ಥರಾಗಿದ್ದರು. ನಂತರ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಪ್ರಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಬೀಮ್ಸ್ ಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೃತನ ಪತ್ನಿ ನೀಡಿದ ದೂರಿನಂತೆ ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.