ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ದೇಶದ ನಂ.1 ಸುಳ್ಳಗಾರ: ಉಗ್ರಪ್ಪ ವಾಗ್ದಾಳಿ

Published 19 ಫೆಬ್ರುವರಿ 2024, 16:16 IST
Last Updated 19 ಫೆಬ್ರುವರಿ 2024, 16:16 IST
ಅಕ್ಷರ ಗಾತ್ರ

ಬಳ್ಳಾರಿ: ನರೇಂದ್ರ ಮೋದಿ ಅವರು ಈ ದೇಶದ ನಂ.1 ಸುಳ್ಳುಗಾರ ಪ್ರಧಾನಿ ಎಂದು ಮಾಜಿ ಸಂಸದ ವಿ.ಎಸ್‌ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರ ಏನು ಸಾಧನೆ ಮಾಡಿದೆ. ಭ್ರಷ್ಟಾಚಾರ ನಿರ್ಮೂಲನೆ ಆಗಿದೆಯೇ? ಉದ್ಯೋಗ ಸೃಷ್ಟಿ ಮಾಡಿದರೇ? ವಿದೇಶಿದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತಂದರೇ? ಪುಲ್ವಾಮಾ ದಾಳಿಗೆ ಕಾರಣ ಯಾರು? ನರೇಂದ್ರ ಮೋದಿ ಅವರು ವಚನಭ್ರಷ್ಟ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

‘ಮೋದಿ ಸುಳ್ಳು ಹೇಳುವುದು ಕಡಿಮೆ ಮಾಡಲಿ. ಶ್ರೀರಾಮನ ಅದರ್ಶಗಳನ್ನು ಪಾಲನೆ ಮಾಡಲಿ’ ಎಂದು ಇದೇ ವೇಳೆ ಉಗ್ರಪ್ಪ ಸಲಹೆ ನೀಡಿದರು. 

‘ಸಿಬಿಐ, ಇಡಿ, ಐಟಿ ಬಳಕೆ ಮಾಡಿ ರಾಜಕಾರಣ ಮಾಡಬಾರದು. ದೇಶದಲ್ಲಿ ಹೆದರಿಸಿ ರಾಜಕೀಯ ಮಾಡುವುದೇ ಬಿಜೆಪಿಗರ ಸಾಧನೆಯಾಗಿದೆ. ದೇಶದಲ್ಲಿ ರಾಜಕೀಯ ಪ್ರೇರಿತ ದಾಳಿಗಳು ನಡೆಯುತ್ತಿವೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮೇಲಿನ ದಾಳಿ ಕೂಡ ರಾಜಕೀಯ ಪ್ರೇರಿತ’ ಎಂದು ಅವರು ಆರೋಪಿಸಿದರು.

‘ಬಿ.ಎಸ್‌ ಯಡಿಯೂರಪ್ಪ ಅವರ ಮೇಲೆ ಸಾಕಷ್ಟು ಆರೋಪಗಳಿವೆ. ಸಿಬಿಐ, ಇ.ಡಿ, ಐ.ಟಿ ದಾಳಿಗಳು ಯಾಕೆ ಅವರ ಮೇಲೆ ನಡೆಯುವುದಿಲ್ಲ’ ಎಂದು ಉಗ್ರಪ್ಪ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT