ಬಳ್ಳಾರಿ: ಆಸ್ತಿಗಾಗಿ ಸ್ವಂತ ಅಕ್ಕನನ್ನೇ ಕೊಂದಿದ್ದ ವೇಣುಗೋಪಾಲ್ ಕೆ.ಜೆ ಎಂಬುವವನಿಗೆ ಜಿಲ್ಲಾ 2ನೇ ಸೆಷನ್ಸ್ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರು ಕಠಿಣ ಜೀವಾವಧಿ ಶಿಕ್ಷೆ ಮತ್ತು ₹25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ನೀಡಲು ವಿಫಲವಾದರೆ, 1 ವರ್ಷ ಸಾದಾ ಶಿಕ್ಷೆ ವಿಧಿಸಬೇಕು ಎಂದು ಕೋರ್ಟ್ ಹೇಳಿದೆ.

ಜತೆಗೆ ಮೃತ ಸುನಂದಾ ಪೂಜಾರ್ ಪುತ್ರ ಅಖಿಲ್ ಪೂಜಾರ್ಗೆ ₹50 ಸಾವಿರ ಪರಿಹಾರ ನೀಡಬೇಕು. ಇಲ್ಲವಾದರೆ ಆಸ್ತಿಯಿಂದ ಈ ಹಣವನ್ನು ಹೊಂದಿಸಿಕೊಡಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆಯಲ್ಲಿ ವೇಣುಗೋಪಾಲ ನೆಲೆಸಿದ್ದರು. ಅಕ್ಕ ಸುನಂದಾ ಕೂಡ ಅದೇ ಮನೆಯಲ್ಲಿ ಇದ್ದರು. ಗಂಡನನ್ನು ಬಿಟ್ಟು ಬಂದಿದ್ದ ಆಕೆ ಆಸ್ತಿಯಲ್ಲಿ ಭಾಗ ಕೇಳಿದ್ದಳು. ಇದರಿಂದ ಪಾರಾಗಲು ಬಯಸಿದ್ದ ವೇಣುಗೋಪಾಲ 2017ರ ನ.3ರಂದು ತನ್ನ ಅಕ್ಕನ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದ. ತಲೆಗೆ ತೀವ್ರ ಪೆಟ್ಟಾಗಿದ್ದ ಸುನಂದಾ ಅವರನ್ನು ವಿಮ್ಸ್ಗೆ ದಾಖಲಿಸಲಾಗಿತ್ತಾದರೂ ಅವರು ಮೃತಪಟ್ಟಿದ್ದರು.

ಪ್ರಕರಣದಲ್ಲಿ 16 ಸಾಕ್ಷಿದಾರರನ್ನು ವಿಚಾರಣೆ ಆಡಲಾಗಿದೆ. ಸರ್ಕಾರದ ಪರವಾಗಿ ಲಕ್ಷ್ಮೀ ದೇವಿ ಪಾಟೀಲ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.