ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಪ್ಲಿ | ಆಡಳಿತ ದಾಳಿ: ನಾಲ್ಕು ಬಾಲಕಾರ್ಮಿಕರ ರಕ್ಷಣೆ

Published 29 ಜೂನ್ 2024, 16:15 IST
Last Updated 29 ಜೂನ್ 2024, 16:15 IST
ಅಕ್ಷರ ಗಾತ್ರ

ಕಂಪ್ಲಿ: ಇಲ್ಲಿಯ ತಹಶೀಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಟ್ಟಣದ ಅಂಗಡಿ, ಇಟ್ಟಿಗೆ ಭಟ್ಟಿ, ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್, ಗ್ಯಾರೇಜ್ ಸೇರಿದಂತೆ 20 ಸ್ಥಳಗಳಲ್ಲಿ ಶನಿವಾರ ದಿಢೀರ್ ದಾಳಿ ನಡೆಸಿ ನಾಲ್ಕು ಬಾಲಕಾರ್ಮಿಕರನ್ನು ರಕ್ಷಿಸಿದರು.

ಬಳಿಕ ಬಾಲ ಕಾರ್ಮಿಕ ಯೋಜನೆ ಯೋಜನಾ ನಿರ್ದೇಶಕ ಎ.ಮೌನೇಶ್ ಮಾತನಾಡಿ, ಗ್ಯಾರೇಜ್, ಮೂರು ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕರನ್ನು ರಕ್ಷಿಸಿದ್ದು, ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಕ್ಷಿಸಿದ ನಾಲ್ಕು ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

ತಹಶೀಲ್ದಾರ್ ಶಿವರಾಜ, ತಾ.ಪಂ ನರೇಗಾ ಎ.ಡಿ ಕೆ.ಎಸ್.ಮಲ್ಲನಗೌಡ, ಪಿಎಸ್‍ಐ ನಿಂಗಪ್ಪ, ಎಎಸ್‍ಐ ಬಸವರಾಜ, ವೆಂಕೋಬರಾವ್, ಇಸಿಒ ಟಿ.ಎಂ.ಬಸವರಾಜ, ಆಹಾರ ನಿರೀಕ್ಷಕ ವಿರುಪಾಕ್ಷಗೌಡ, ತಾಲ್ಲೂಕು ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ಸಹಾಯಕ ಕೃಷಿ ಅಧಿಕಾರಿ ಜ್ಯೋತಿ, ಅಂಗನವಾಡಿ ಮೇಲ್ವಿಚಾರಕಿ ಉಷಾಸಿಂಗ್, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಜೀವನ್‍ಸ್ವಾತಿ, ಕಾರ್ಮಿಕ ನಿರೀಕ್ಷಕ ಕಚೇರಿಯ ಡಿಇಒ ಅನಿಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT