ಕಂಪ್ಲಿ ಸೋಮಪ್ಪಕೆರೆ ವ್ಯಾಪ್ತಿಯಲ್ಲಿ ಅಳವಡಿಸಿದ್ದ ನುಣುಪಾದ ಕಲ್ಲಿನ ಬೆಂಚ್‍ಗಳ ಬಂಡೆಗಳನ್ನು ಕೆಡವಿರುವ ದೃಶ್ಯ
ಕಂಪ್ಲಿ ಸೋಮಪ್ಪಕೆರೆ ಉದ್ಯಾನದಲ್ಲಿ ಅಳವಡಿಸಿರುವ ಮಕ್ಕಳ ಆಟಿಕೆ ಸಾಮಾನುಗಳು ಅಳವಡಿಸಿರುವ ಸ್ಥಳದಲ್ಲಿ ಮಳೆ ನೀರು ನಿಂತಿರುವ ದೃಶ್ಯ
ಹಾಳಾಗಿರುವ ಸಂಚಾರಿ ಗ್ರಂಥಾಲಯ ಬಸ್‍ನಲ್ಲಿ ಅನೈತಿಕ ಚಟುವಟಿಕೆಗಳು ಮದ್ಯ ಸೇವನೆ ಪಾರ್ಟಿಗಳು ರಾಜರೋಷವಾಗಿ ನಡೆಯುತ್ತಿವೆ. ಕೂಡಲೆ ಅಧಿಕಾರಿಗಳು ಬಸ್ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕು.
ಜಿ.ಎಂ. ಸುರೇಶ್ ಉಪಾಧ್ಯಕ್ಷರು ಐತಿಹಾಸಿಕ ಸೋಮಪ್ಪ ಕೆರೆ ವಾಯು ವಿಹಾರಿಗಳ ಸಂಘ
ಕೆರೆ ವ್ಯಾಪ್ತಿಯಲ್ಲಿ ‘ಟ್ರೀ ಪಾರ್ಕ್’ ನಿರ್ಮಾಣಕ್ಕೆ ₹2ಕೋಟಿ ಮಂಜೂರಾಗಿದ್ದು ಚಾಲನೆ ನೀಡಲಾಗುವುದು. ಮಾದರಿ ಉದ್ಯಾನ ಕೆರೆ ಸುತ್ತಲೂ ಹಸೀಕರಣ ಬೋಟಿಂಗ್ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತೆ ₹7ಕೋಟಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ಕೆರೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ತಾಲ್ಲೂಕು ಶಾಖಾ ಗ್ರಂಥಾಲಯಕ್ಕೆ ಪೀಠೋಪಕರಣ ಬಂದ ನಂತರ ಆರಂಭಿಸಲಾಗುವುದು. ಕೆರೆ ರಕ್ಷಣೆಗಾಗಿ ಕಾವಲುಗಾರರನ್ನು ನೇಮಿಸುವಂತೆ ಪುರಸಭೆಗೆ ಸೂಚಿಸುತ್ತೇನೆ.
ಜೆ.ಎನ್. ಗಣೇಶ್ ಶಾಸಕರು ಕಂಪ್ಲಿ
ಕೆರೆ ಅಭಿವೃದ್ಧಿ ಕುರಿತಂತೆ ಶಾಸಕ ಜೆ.ಎನ್. ಗಣೇಶ್ ಅವರ ಗಮನಸೆಳೆಯಲಾಗಿದೆ. ಪಟ್ಟಣದ ಜನರ ಆಶಯದಂತೆ ಕೆರೆ ಪ್ರದೇಶ ನಿರ್ವಹಣೆ ಪ್ರಮುಖವಾಗಿ ಕಾವಲುಗಾರ ನೇಮಕ ಕುರಿತಂತೆ ಮುಂದಿನ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.