ಹರಪನಹಳ್ಳಿ: ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆ ಆಗದೇ 662 ಅರ್ಜಿಗಳನ್ನು ವಿಮಾ ಕಂಪನಿಯವರು ತಿರಸ್ಕೃತಗೊಳಿಸಲಾಗಿದ್ದು, ಅಂತಹ ಜಮೀನುಗಳ ರೈತರು ಅಗತ್ಯ ದಾಖಲಾತಿಗಳೊಂದಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಕೃಷಿ ಸಹಾಯಕ ನಿರ್ದೇಶಕ ವಿ.ಸಿ.ಉಮೇಶ್ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 2023-24ನೇ ಸಾಲಿನ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಹೋಲಿಕೆ ಆಗದ ಒಟ್ಟು ತಾಲ್ಲೂಕಿನ 662 ಫಲಾನುಭವಿ ರೈತರ ಪ್ರಸ್ತಾವಗಳು ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆ ಆಗದ ಕಾರಣ ವಿಮಾ ಕಂಪನಿಯರು ಅರ್ಜಿ ತಿರಸ್ಕೃತಗೊಳಿಸಿದ್ದಾರೆ.

ಅನರ್ಹರಾಗಿರುವ ಎಲ್ಲ ರೈತರು ಹತ್ತಿರ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಕೊಟ್ಟು ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರುವ 2023-24ರ ಪಹಣಿ, ಬೆಂಬಲ ಬೆಲೆ ಪಡೆಯದೇ ಇರುವ ರಸೀದಿ, ಬೆಳೆ ಮಾರಾಟ ಮಾಡಿರುವ ರಸೀದಿಗಳ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಫೆ.20 ರಿಂದ ಅರ್ಜಿ ಸ್ವೀಕಾರ ಆರಂಭಿಸಲಾಗಿದ್ದು ಮಾರ್ಚ್ 7 ಕೊನೆಯ ದಿನವಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.