ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡ್ಲಿಗಿ | ಶಾಸಕರಿಂದ ಕೆರೆಗಳಿ ಬಾಗಿನ ಆರ್ಪಣೆ

Published 4 ಸೆಪ್ಟೆಂಬರ್ 2024, 13:51 IST
Last Updated 4 ಸೆಪ್ಟೆಂಬರ್ 2024, 13:51 IST
ಅಕ್ಷರ ಗಾತ್ರ

ಕೂಡ್ಲಿಗಿ: ನಿರಂತರ ಮಳೆಯಿಂದ ತುಂಬಿ ಕೋಡಿ ಬಿದ್ದ ತಾಲ್ಲೂಕಿನ ರಾಮದುರ್ಗ, ಗುಡೇಕೋಟೆ ಹಾಗೂ ಅಪ್ಪೇನಹಳ್ಳಿ ಕೆರೆಗಳಿಗೆ ಮಂಗಳವಾರ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಬಾಗಿನ ಆರ್ಪಿಸಿದರು.

ನಂತರ ಮಾತನಾಡಿದ ಅವರು, ಕಳೆದ ವರ್ಷ ತೀವ್ರ ಮಳೆಯ ಕೊರತೆಯಿಂದ ಕೆರೆಗಳಲ್ಲಿ ನೀರು ಇರಲಿಲ್ಲ. ಆದರೆ ಈ ವರ್ಷ ಉತ್ತಮ ಮಳೆಯಾಗಿ ಬಹುತೇಕ ಕೆರೆಗಳು ತುಂಬಿವೆ. ಅಲ್ಲದೆ ತಾಲ್ಲೂಕಿನಾದ್ಯಂತ ಉತ್ತಮ ಬೆಳೆ ಬಂದಿದೆ. ಈ ಬಾರಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ನೀಗಿದ್ದು, ಮೇವಿನ ಕೊರತೆಯೂ ಇಲ್ಲದಂತಾಗಿದೆ. ಶೀಘ್ರದಲ್ಲಿಯೆ ಕೆರೆ ತುಂಬಿಸುವ ಯೋಜನೆ ಜಾರಿಯಾಗಲಿದ್ದು ತಾಲ್ಲೂಕಿನ ಎಲ್ಲಾ ಕೆರೆಗಳು ತುಂಬಲಿವೆ ಎಂದರು.

ಗುಡೇಕೋಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್. ಕೃಷ್ಣ, ರಾಮ ರಾಮದುರ್ಗ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಣ್ಣ, ಮುಖಂಡರಾದ ಕೆ. ರಾಘವೇಂದ್ರ ರಾವ್, ಶಿವರಾಜ್ ವರ್ಮ, ಪ್ರಸನ್ನ ಕುಮಾರ್, ಎಸ್. ಬೊಮ್ಮಣ್ಣ, ಪೇಂಟ್ ತಿಪ್ಪೇಸ್ವಾಮಿ, ದಿನ್ನೆ ಮಲ್ಲಿಕಾರ್ಜುನ, ಉಮೇಶ್ ನಾಯ್ಕ್, ಕೃಷ್ಣಪ್ಪ, ಜಯಣ್ಣ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಬಸಮ್ಮ, ಕೃಷ್ಣ ನಾಯ್ಕ್, ಹನುಮಂತಪ್ಪ, ಜಿ.ಬಿ. ಮಹೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT