ಸಂಡೂರು: ಜಿಲ್ಲಾ ಪಂಚಾಯಿತಿಯ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ–ದಿಶಾ’ ಸಮಿತಿ ಸಭೆಯು ಸೋಮವಾರ ಸಂಡೂರು ತಾಲೂಕಿನ ನಂದಿಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಂಸದ ಇ. ತುಕಾರಾಂ ಅಧ್ಯಕ್ಷತೆಯಲ್ಲಿ ನಡೆಯಿತು.

ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಜತೆಗೆ, ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಕಾಮಗಾರಿಗಳ ಪರಿಶೀಲನೆ, ಹಿಂದಿನ ಸಭೆಯ ಅನುಪಾಲನೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಕೆಲ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಕೊಂಡಾಡಿದ ಸಂಸದ ತುಕಾರಾಂ ಕೆಲ ಅಧಿಕಾರಿಗಳ ಕಾರ್ಯವೈಖರಿಗೆ ಕಿಡಿಕಾರಿದರು. ವಿವಿಧ ಕೆಲಸ ಕಾರ್ಯಗಳ ಕುರಿತು ಕೆಲ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ಅವರು ನೀಡಿದರು.

ಎಲ್ಲ ತಾಲೂಕುಗಳಿಗೆ ವ್ಯವಸ್ಥಿತ ಎಪಿಎಂಸಿ: ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಶೀಥಲಗೃಹವುಳ್ಳ ವ್ಯವಸ್ಥಿತ ಕೃಷಿ ಮಾರುಕಟ್ಟೆ ಇರಬೇಕಾದ ಅಗತ್ಯವನ್ನು ಸಂಸದ ತುಕಾರಂ ದಿಶಾ ಸಭೆಯಲ್ಲಿ ಪ್ರತಿಪಾದಿಸಿದರು. ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಕೃಷಿ, ತೋಟಗಾರಿಕೆ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಿಗೆ ಸೂಚಿಸಿದರು.

ಎಪಿಎಂಸಿಗಳ ಆಸ್ತಿ ರಕ್ಷಣೆಯಾಗಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಎಲ್ಲ ಎಪಿಎಂಸಿಗಳಲ್ಲೂ ಮೀನು ಮತ್ತು ಕೋಳಿ ಮಾರಾಟಕ್ಕೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲು ಸೂಚಿಸಿದರು.

ವೈಜ್ಞಾನಿಕ ಬೆಳೆಗೆ ಕ್ರಮ: ಜಿಲ್ಲೆಯಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿಲ್ಲ. ಯಾವ ಮಣ್ಣಿಗೆ ಯಾವ ಬೆಳೆ ಆಗಿ ಬರುತ್ತದೆ ಎಂಬುದರ ಬಗ್ಗೆ ಅಧಿಕಾರಿಗಳು ರೈತರಿಗೆ ತಿಳಿಸಬೇಕು. ಇದಕ್ಕಾಗಿ ತಜ್ಞರ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿಗೆ ಸಂಸದ ಸೂಚಿಸಿದರು.

ಅಕ್ರಮ ಅಕ್ಕಿ ಸಾಗಣೆ ವಿರುದ್ಧ ಆಕ್ರೋಶ: ಜಿಲ್ಲೆಯಲ್ಲಿ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಇ. ತುಕಾರಾಂ, ಈ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ‘ಯಾರೇ ಆಗಲಿ ಒದ್ದು ಒಳಗೆ ಹಾಕಿ, ನಮ್ಮ ಹೆಸರು ಹೇಳಿದರೂ ಬಿಡಬೇಡಿ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಇದೇ ಸೂಚನೆ ನೀಡಿದ ಅವರು, ದಂಧೆಕೋರರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಸೂಚಿಸಿದರು. ಜತೆಗೆ ಜಿಲ್ಲೆಯಲ್ಲಿ ಮಟ್ಕಾ, ಜೂಜು ಹೆಚ್ಚಾಗಿದ್ದು, ಅದನ್ನೂ ನಿಯಂತ್ರಣಕ್ಕೆ ತರಬೇಕಾಗಿ ತಾಕೀತು ಮಾಡಿದರು.

ಆಂಧ್ರದ ಗಡಿಯಿಂದ ರಾಜ್ಯಕ್ಕೆ ಬರುತ್ತಿರುವ ಸಿ.ಎಚ್ ಪೌಡರ್ ಎಂಬ ಅಮಲು ಪದಾರ್ಥವನ್ನು ನಿಯಂತ್ರಿಸಬೇಕು ಎಂದು ಪೊಲೀಸ್ ಇಲಾಖೆಗೆ ಆಗ್ರಹಿಸಿದರು.

ಖಾಲಿ ಹುದ್ದೆ ವಿವರ ಕೇಳಿದ ಸಂಸದ: ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳಲ್ಲೂ ಖಾಲಿ ಉಳಿದಿರುವ ಹುದ್ದೆಗಳ ವಿವರ, ಅಗತ್ಯವಿರುವ ಸಿಬ್ಬಂದಿ, ವರ್ಗಾವಣೆ ಪಟ್ಟಿಯನ್ನು ಎಲ್ಲ ಹಿರಿಯ ಅಧಿಕಾರಿಗಳು ಸಲ್ಲಿಸಬೇಕು ಎಂದು ಸಂಸದ ಇ. ತುಕಾರಾಂ ಅಧಿಕಾರಿಗಳಿಗೆ ತಿಳಿಸಿದರೆ. ಸಂಬಂಧಿಸಿದ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಮರು ಸರ್ವೆಗೆ ಸೂಚನೆ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳು, ಅಂಗನವಾಡಿಗಳು, ಕಾಲೇಜು ಕಟ್ಟಡ, ಸಂಚಾರಿ ಕ್ಲಿನಿಕ್ಗಳು ಎಷ್ಟಿವೆ, ಎಷ್ಟು ಅಗತ್ಯವಿದೆ ಎಂಬುದರ ಕುರಿತು ಸರ್ವೆ ನಡೆಸಲು ಸೂಚಿಸಲಾಗಿದೆ. ಜತೆಗೆ ಈಗಿರುವ ಆಸ್ಪತ್ರೆಗಳ ಪರಿಸ್ಥಿತಿ ಪರಿಶೀಲಿಸಲು ಸೂಚಿಸಲಾಗಿದೆ ಎಂದು ಸಂಸದ ತುಕಾರಂ ಮಾಧ್ಯಮಗಳಿಗೆ ತಿಳಿಸಿದರು.

ನೀರು ಸರಬರಾಜಿಗೆ ಕ್ರಮ: ಬಳ್ಳಾರಿ ಗ್ರಾಮಾಂತರ ಭಾಗದಲ್ಲಿ ನೀರಿಗೆ ಕೊಳವೆ ಬಾವಿಗಳನ್ನು ಅವಲಂಬಿಸಲಾಗಿದೆ. ಇದರ ಬದಲಿಗೆ ಹಗರಿಯಿಂದ ನೀರು ತರುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ತುಕಾರಾಂ ತಿಳಿಸಿದರು. ಜತೆಗೆ 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ನೀರಿನ ಸಂಗ್ರಹಾಗಾರಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

3 ವರ್ಷಗಳಲ್ಲಿ ಮಾದರಿ ಅಂಗನವಾಡಿ: ಜಿಲ್ಲೆಯಲ್ಲಿ 350 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದನ್ನು ಗಮನಿಸಿದ ಸಂಸದ ಇ ತುಕಾರಾಂ, ಇನ್ನು ಮೂರು ವರ್ಷಗಳಲ್ಲಿ ಎಲ್ಲ ಅಂಗನವಾಡಿಗಳಿಗೆ ಸ್ವಂತ ಜಾಗ, ಕಟ್ಟಡ ಸಿಗುವಂತೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು. ಇದಕ್ಕೆ ಬೇಕಾದ ನೆರವು ನೀಡಲು ನಾನು ಸಿದ್ಧ ಎಂದು ಹೇಳಿದರು.

ನಗರ ಪ್ರದೇಶದಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಪಾಲಿಕೆ ಆಯುಕ್ತರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಅಂಗನವಾಡಿ ಕಾರ್ಯಕರ್ತರು, ಸಹಾಯಕರ ಹುದ್ದೆಗಳಿಗೆ ಆದಷ್ಟು ಬೇಗ ನೇಮಕಾತಿ ನಡೆಸುವಂತೆ ಜಿಲ್ಲಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದರು. ಇದರಲ್ಲಿ ಯಾವ ರಾಜಕೀಯ ಹಸ್ತಕ್ಷೇಪವೂ ಇಲ್ಲ ಎಂಬುದನ್ನು ಆಕಾಂಕ್ಷಿಗಳಿಗೆ ಸರಿಯಾಗಿ ತಿಳಿಹೇಳಿ ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.

ಎಸ್ಎಸ್ಎಲ್ಸಿ ಫಲಿತಾಂಶ ಕುಸಿತಕ್ಕೆ ಆಕ್ಷೇಪ: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲೆ ನಿರಾಶೆ ಮಾಡಿರುವುದು ಸಭೆಯಲ್ಲಿ ಚರ್ಚೆಯಾಯಿತು. ಈ ಬಗ್ಗೆ ಸಂಸದ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ವಿಮರ್ಶೆಗೆ ಗುರಿಯಾಗಿಸಿದರು.

ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶಿಕ್ಷಣ ಎಂದರೆ ಬರಿ ಕಟ್ಟಡಗಳ ನಿರ್ಮಾಣವಲ್ಲ ಎಂದು ಜಿಲ್ಲಾಧಿಕಾರಿ ಟೀಕಿಸಿದರು. ಈ ವರೆಗೆ ಆಗಿರುವುದನ್ನು ಬಿಟ್ಟು ಮುಂದೆ ಆಗಬೇಕಾದ್ದನ್ನು ಗಮನಿಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ತಾಕೀತು ಮಾಡಿದರು.

ಅಧಿಕಾರಿಗಳಿಗೆ ನೊಟೀಸ್:ಸಂಸದರ ನೇತೃತ್ವದಲ್ಲಿ ನಡೆಯುವ ದಿಶಾ ಸಭೆಗೆ ಬಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರೈಲ್ವೆ, ಬಿಎಸ್ಎನ್ಎಲ್, ಎಪಿಎಂಸಿ ಅಧಿಕಾರಿಗಳ ವಿರುದ್ಧ ಸಂಸದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲರಿಗೂ ನೊಟೀಸ್ ನೀಡುವಂತೆ ಅವರು ಸೂಚಿಸಿದರು.

ರೈಲ್ವೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿರುವ ಬಗ್ಗೆ, ಸಿದ್ಧಮ್ಮನಹಳ್ಳಿ ರೈಲ್ವೆ ಸೇತುವೆ ಕಾಮಗಾರಿ ಸ್ಥಳದಲ್ಲಿ ಕಬ್ಬಿಣ ಕಳ್ಳತನವಾಗಿರುವ ಬಗ್ಗೆ ಅವರು ಸಭೆಯಲ್ಲಿದ್ದ ಕಿರಿಯ ಹಂತದ ರೈಲ್ವೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಮುನಿರಾಜು, ಸಂಡೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಿದಾನಂದಪ್ಪ ಮತ್ತು ಇತರರು ಇದ್ದರು.

Cut-off box - ಗೊಲ್ಲರಹಟ್ಟಿ ಹೆಣ್ಣುಮಕ್ಕಳಿಗೆ ಸಮುದಾಯ ಭವನ ಹೆರಿಗೆ ಋತುಮತಿ ಮುಟ್ಟಾದ ಹೆಣ್ಣುಮಕ್ಕಳನ್ನು ಗೊಲ್ಲರ ಹಟ್ಟಿಗಳಲ್ಲಿ ಮನೆಯಿಂದ ಹೊರಗಿಡಲಾಗುತ್ತಿದೆ ಎಂದು ಸಭೆಯಲ್ಲಿ ಹಾಜರಿದ್ದ ಸಂಡೂರು ಶಾಸಕಿ ಅನ್ನಪೂರ್ಣ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಹೇಳಿದರು. ಹಾಗೆ ಹೊರಹಾಕಲ್ಪಡುವ ಹೆಣ್ಣುಮಕ್ಕಳಿಗೆ ಸ್ಥಳೀಯವಾಗಿ ಎಲ್ಲ ವ್ಯವಸ್ಥೆಯುಳ್ಳ ಸಮುದಾಯ ಭವನ ನಿರ್ಮಾಣ ಮಾಡುವಂತೆ ಅವರು ಸೂಚಿಸಿದರು. ಇದನ್ನು ಸಂಸದರೂ ಅನುಮೋದಿಸಿದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಸೂಕ್ತ ರೀತಿಯಲ್ಲಿ ಕೌನ್ಸೆಲಿಂಗ್ ಮಾಡಬೇಕು. ಅವರ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಘಟಕಗಳನ್ನು ಆರಂಭಿಸಬೇಕು ಎಂದೂ ಅವರು ಹೇಳಿದರು.

Cut-off box - ಭ್ರಷ್ಟತೆ ಪಾಪ ನಿನ್ನ ಮಕ್ಕಳಿಗೆ ಅಂಟುತ್ತದೆ ಸಭೆಯಲ್ಲಿ ಸಂಸದ ಇ.ತುಕಾರಾಂ ವಿಭಾಗೀಯ ಅಧಿಕಾರಿ (ಎ.ಸಿ) ಪ್ರಮೋದ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ಭ್ರಷ್ಟಾಚಾರ ನಿಲ್ಲಿಸು. ಇಲ್ಲವಾದರೆ ಅದರ ಪಾಪ ನಿನ್ನ ಮಕ್ಕಳಿಗೆ ಅಂಟುತ್ತದೆ’ ಎಂದು ಕಟುವಾದ ಶಬ್ಧಗಳಿಂದ ಟೀಕಿಸಿದರು. ಅಂಗನವಾಡಿಗಳಿಗೆ ಸ್ವಂತದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಚರ್ಚೆಯ ವೇಳೆ ಎ.ಸಿ ನೀಡಿದ ಉತ್ತರದಿಂದ ಮೊದಲಿಗೆ ಜಿಲ್ಲಾಧಿಕಾರಿ ಕುಪಿತಗೊಂಡರು. ಜಿಲ್ಲಾಧಿಕಾರಿ ಮಾತನಾಡುತ್ತಿರುವಾಗಲೇ ಮೈಕ್ ತೆಗೆದುಕೊಂಡ ಸಂಸದ ‘ಪ್ರಮೋದ್ ನಿನ್ನ ಬಗ್ಗೆ ಬಹಳಷ್ಟು ದೂರುಗಳಿವೆ. ಜಿಲ್ಲೆಯ ಕಡು ಭ್ರಷ್ಟ ಅಧಿಕಾರಿ ನೀನು. ಇದನ್ನು ಬಿಟ್ಟು ತಿದ್ದಿಕೊಳ್ಳುವ ಪ್ರಯತ್ನ ಮಾಡು ಬದಲಾಗು. ಇಲ್ಲದೇ ಹೋದರೆ ನಿನ್ನ ಪಾಪ ನಿನ್ನ ಮಕ್ಕಳಿಗೆ ಅಂಟುತ್ತದೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.